ಅಸ್ಸಾಮ್ | ಯುಎಪಿಎ ಕಾಯ್ದೆ ಅಡಿಯಲ್ಲಿ ಮೂವರ ಬಂಧನ

Prasthutha|

ಅಸ್ಸಾಮ್: ಅಸ್ಸಾಮ್ ಮಿಯಾ ಪರಿಷತ್ತಿನ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿ ಸೇರಿದಂತೆ ಮೂವರನ್ನು ಯುಎಪಿಎ ಕಾಯ್ದೆ ಅಡಿಯಲ್ಲಿ ಬಂಧಿಸಲಾಗಿದೆ ಎಂದು ಅಸ್ಸಾಮ್ ಪೊಲೀಸರು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

- Advertisement -

ಮಿಯಾ ಪರಿಷತ್ ಅಧ್ಯಕ್ಷ ಎಂ. ಮೊಹರ್ ಅಲಿ ಅವರು ಧರಣಿ ಕುಳಿತಿದ್ದಾಗ ಮ್ಯೂಸಿಯಂನಿಂದ ಅವರನ್ನು ಬಂಧಿಸಲಾಗಿದ್ದು, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಬತೇನ್ ಶೇಖ್ ಅವರನ್ನು ಧುಬ್ರಿ ಜಿಲ್ಲೆಯ ಅಲಂಗಂಜ್’ನಲ್ಲಿರುವ ಅವರ ನಿವಾಸದಿಂದ ವಶಕ್ಕೆ ಪಡೆಯಲಾಗಿದೆ.

ಮೂರನೇ ವ್ಯಕ್ತಿ ತನಿ ಧಧುಮಿಯಾ ಎಂಬವರು ನಹರ್ಕಟಿಯಾ ಜೂನಿಯರ್ ಕಾಲೇಜಿನ ಪ್ರಾಧ್ಯಾಪಕರಾಗಿದ್ದಾರೆ.

- Advertisement -

ಕಳೆದ ಭಾನುವಾರ ಉದ್ಘಾಟನೆಗೊಂಡ ಮಿಯಾ ಮ್ಯೂಸಿಯಂನೊಂದಿಗೆ ಈ ಮೂವರು ಸಂಬಂಧ ಹೊಂದಿದ್ದರು. ಬಂಗಾಳಿ ಮೂಲದ ಮುಸ್ಲಿಮ್ ಗುಂಪಿನ ಪರಂಪರೆಯನ್ನು ಪ್ರದರ್ಶಿಸುವ ಖಾಸಗಿ ಸೆಟಪ್ ಅನ್ನು ಜಿಲ್ಲಾಡಳಿತ ಮಂಗಳವಾರ ಸೀಲ್ ಮಾಡಿದೆ.

ಭಾರತದಲ್ಲಿ ಅಲ್ ಖೈದಾ ಮತ್ತು ಅನ್ಸಾರುಲ್ ಬಾಂಗ್ಲಾ ತಂಡ ಜೊತೆಗಿನ ಸಂಬಂಧದ ಆರೋಪವನ್ನು ಕೇಂದ್ರೀಕರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.



Join Whatsapp