ಅಸ್ಸಾಮ್ ಪೊಲೀಸರಿಂದಾದ 31 ಕೊಲೆಗಳ ಪೈಕಿ 14 ಮಂದಿ ಮುಸ್ಲಿಮರು: ಆಘಾತಕಾರಿ ಅಂಶ ಬಹಿರಂಗ

Prasthutha|

ನವದೆಹಲಿ: ಹಿಮಂತ್ ಬಿಸ್ವಾ ಶರ್ಮಾ ಅವರು ಅಸ್ಸಾಮ್ ನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೇ ತಿಂಗಳಿನಿಂದ ನವೆಂಬರ್ ಅಂತ್ಯದ ವರೆಗೆ ಪೊಲೀಸರು ನಡೆಸಿದ 31 ಜನರ ಕೊಲೆಗಳ ಪೈಕಿ 14 ಮಂದಿ ಮುಸ್ಲಿಮರು ಎಂಬ ಆಘಾತಕಾರಿ ಅಂಶ ಸ್ಕ್ರಾಲ್ ನಡೆಸಿದ ಅಧ್ಯಯನದಿಂದ ಬಹಿರಂಗಗೊಂಡಿದೆ.

- Advertisement -

ಶಸ್ತ್ರಾಸ್ತ್ರ ಕಸಿಯಲು ಯತ್ನ ಅಥವಾ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನ ಎಂಬ ಆರೋಪದಲ್ಲಿ ಹಲವು ಮಂದಿಯನ್ನು ಪೊಲೀಸರು ಶೂಟೌಟ್ ಮಾಡಿ ಕೊಂದಿರುವುದು ಸ್ಕ್ರಾಲ್ ಇತ್ತೀಚೆಗೆ ಪ್ರಕಟಿಸಿದ ವರದಿಯಿಂದ ಬಹಿರಂಗವಾಗಿದೆ.

ಮೇ ತಿಂಗಳಿನಿಂದ ನವೆಂಬರ್ ಅಂತ್ಯದ ವರೆಗೆ ಒಟ್ಟು 28 ಮಂದಿಯನ್ನು ಎನ್ಕೌಂಟರ್ ನಲ್ಲಿ ಪೊಲೀಸರು ಕೊಂದಿದ್ದಾರೆ. ಇನ್ನಿಬ್ಬರು ಕಸ್ಟಡಿಯಲ್ಲಿ ಸಾವನ್ನಪ್ಪಿದ್ದು, ಮತ್ತೊಬ್ಬ ಡಿಸೆಂಬರ್ ನಲ್ಲಿ ನಡೆದ ಶೂಟೌಟ್ ನಲ್ಲಿ ಸಾವನ್ನಪ್ಪಿರುವುದು ಸ್ಕ್ರಾಲ್ ವರದಿಯಲ್ಲಿ ಉಲ್ಲೇಖಿಸಿದೆ.

- Advertisement -

ಪೊಲೀಸರು ಹತ್ಯೆ ನಡೆಸಿದವರಲ್ಲಿ ಹೆಚ್ಚಿನವರು ಧಾರ್ಮಿಕ ಅಲ್ಪಸಂಖ್ಯಾತರು ಎಂಬುದು ವಾಸ್ತವ

ಕಳೆದ ಸೆಪ್ಟೆಂಬರ್ 23 ರಂದು ಅಸ್ಸಾಮ್ ನ ಸಿಪಝಾರ್ ಎಂಬಲ್ಲಿ ಬಲವಂತದ ಒಕ್ಕಲೆಬ್ಬಿಸುವ ವೇಳೆ ನಡೆದ ಘರ್ಷಣೆಯಲ್ಲಿ ಪೊಲೀಸರ ಗುಂಡಿನ ದಾಳಿಗೆ ಇಬ್ಬರು ಸಾವನ್ನಪ್ಪಿದ್ದರು. ಮಾತ್ರವಲ್ಲ ಛಾಯಾಗ್ರಾಹಕ ಬಿಜೋಯ್ ಬನಿಯಾ ಎಂಬಾತ ಮೃತದೇಹದ ಮೇಲೆ ಕುಣಿದು ಕುಪ್ಪಳಿಸಿ ವಿಕೃತ ಮೆರೆದಿದ್ದ.

ಮೇ 10 – ಡಿಸೆಂಬರ್ 10 ನಡುವೆ ಪೊಲೀಸರು ನಡೆಸಿದ ಗುಂಡಿನ ದಾಳಿಗೆ ಗಾಯಗೊಂಡ 55 ಪೈಕಿ ಕನಿಷ್ಠ 30 ಮಂದಿ ಮುಸ್ಲಿಮರು ಎಂಬುದು ಗಮನಾರ್ಹ



Join Whatsapp