ಅಸ್ಸಾಂ-ನಾಗಾಲ್ಯಾಂಡ್‌ ಗಡಿ ಘರ್ಷಣೆ : ಕಾಂಗ್ರೆಸ್‌ ಶಾಸಕನ ಮೇಲೆ ಗುಂಡಿನ ದಾಳಿ

Prasthutha|

ನವದೆಹಲಿ : ಅಸ್ಸಾಂ-ನಾಗಲ್ಯಾಂಡ್‌ ಗಡಿಗೆ ಸಂಬಂಧಿಸಿದ ಘರ್ಷಣೆಯೊಂದರ ಪರಿಶೀಲನೆಗೆ ತೆರಳಿದ್ದ ಕಾಂಗ್ರೆಸ್‌ ಶಾಸಕರೊಬ್ಬರಿಗೆ, ಅವರ ಭದ್ರತಾ ಸಿಬ್ಬಂದಿಯಿದ್ದಾಗ್ಯೂ, ಗುಂಡಿನ ದಾಳಿ ನಡೆದಿದೆ. ಕಾಂಗ್ರೆಸ್‌ ಶಾಸಕ ರೂಪ್‌ ಜ್ಯೋತಿ ಕುರ್ಮಿ ಮತ್ತು ಅವರ ಭದ್ರತಾ ಸಿಬ್ಬಂದಿ ಮೇಲೆ ದಾಳಿ ನಡೆದಿದೆ.

- Advertisement -

ಜೊರ್ಹಾತ್‌ ಜಿಲ್ಲೆಯ ದಿಸೈ ಕಣಿವೆ ರಕ್ಷಿತಾರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಈ ಪ್ರದೇಶದಲ್ಲಿ ಅಸ್ಸಾಂನ ಮರಿಯಾನಿ ವಿಧಾನಸಭಾ ಕ್ಷೇತ್ರದ ಶಾಸಕ ರೂಪ್‌ ಜ್ಯೋತಿ ಪರಿಶೀಲನೆಗೆ ತೆರಳಿದ್ದರು. ಈ ವೇಳೆ ನಾಗಾಲ್ಯಾಂಡ್‌ ಕಡೆಯಿಂದ ಅಪರಿಚಿತ ಶಸ್ತ್ರಾಸ್ತ್ರಧಾರಿಗಳು ಗೂಂಡಿನ ದಾಳಿ ಮಾಡಿದ್ದಾರೆ.  

ನಾಗಾಲ್ಯಾಂಡ್‌ ನ ಮೊಕೊಕ್ಚುಂಗ್‌ ಜಿಲ್ಲೆಯ ಮಾಂಗ್ಕೊಲೆಂಬ ವಲಯದ ಚಂಗ್ಕಿ ಗ್ರಾಮ ಮತ್ತು ಅಸ್ಸಾಂನ ಜೊರ್ಹಾತ್‌ ಜಿಲ್ಲೆಯ ಮೈರಾನಿ ಪೊಲೀಸ್‌ ಠಾಣೆ ವ್ಯಾಪ್ತಿಯ ದಿಸೈ ಕಣಿವೆ ರಕ್ಷಿತಾರಣ್ಯದ ಬೊಂಗಾಂವ್‌ ಮತ್ತು ಸೋನಾಪುರ ಗ್ರಾಮದ ನಡುವೆ ಈ ವಿವಾದಿತ ಪ್ರದೇಶವಿದೆ.



Join Whatsapp