ಪೋಷಕರೊಂದಿಗೆ ಸಮಯ ಕಳೆಯಲು ಸರ್ಕಾರಿ ನೌಕರರಿಗೆ ವಿಶೇಷ ರಜೆಯನ್ನು ಘೋಷಿಸಿದ ಅಸ್ಸಾಂ ಸರ್ಕಾರ

Prasthutha|

ಗುವಾಹಟಿ: 2 ನೇ ಬಾರಿಗೆ ಅಸ್ಸಾಂ ಸರ್ಕಾರ ತನ್ನ ನೌಕರರಿಗೆ ಪೋಷಕರೊಂದಿಗೆ ಸಮಯ ಕಳೆಯುವುದಕ್ಕಾಗಿ ವಿಶೇಷ ರಜೆಯನ್ನು ಅನುಮತಿಸಿದೆ.

- Advertisement -

ಮುಂದಿನ ವರ್ಷ ಫೆ.09 ಹಾಗೂ 10 ರಂದು ಉದ್ಯೋಗಿಗಳು ಈ ವಿಶೇಷ ಸಿಎಲ್ ಅನ್ನು ಪಡೆಯಬಹುದಾಗಿದೆ.

ಈ ರಜೆಗಳನ್ನು ನಿಯಮಿತ ರಜಾದಿನಗಳಾದ ಎರಡನೇ ಶನಿವಾರ ಮತ್ತು ಭಾನುವಾರಗಳ ಜೊತೆಗೆ ಬರುವಂತೆ ನೋಡಿಕೊಳ್ಳಲಾಗುತ್ತದೆ. ಇದರಿಂದಾಗಿ ಉದ್ಯೋಗಿಗಳಿಗೆ ತಮ್ಮ ಪೋಷಕರೊಂದಿಗೆ ಸಮಯ ಕಳೆಯುವುದಕ್ಕೆ ನಾಲ್ಕು ದಿನಗಳು ಲಭ್ಯವಾಗಲಿದೆ. ರಜೆ ಸೌಲಭ್ಯಗಳ ವಿವರಗಳನ್ನು ವಿಶೇಷ ವೆಬ್ ಪೋರ್ಟಲ್ ಮೂಲಕ ತಿಳಿಸಲಾಗುತ್ತದೆ ಎಂದು ಸರ್ಕಾರಿ ಆದೇಶದಲ್ಲಿ ತಿಳಿಸಿದೆ.

- Advertisement -

 ಸಿಎಂ, ಮುಖ್ಯಕಾರ್ಯದರ್ಶಿ, ಡಿಜಿಪಿ ಹೊರತುಪಡಿಸಿ, ಸಚಿವರು ಸೇರಿದಂತೆ ಎಲ್ಲಾ ಸರ್ಕಾರಿ ನೌಕರರೂ ಈ ರೀತಿಯ ಸೌಲಭ್ಯವನ್ನು ಪಡೆಯಬಹುದಾಗಿದೆ.

2021 ರ ಸ್ವಾತಂತ್ರ್ಯ ದಿನದಂದು ಸಿಎಂ ಹಿಮಂತ ಬಿಸ್ವ ಶರ್ಮಾ ವಿಶೇಷ ರಜೆ ಸೌಲಭ್ಯವನ್ನು ಘೋಷಿಸಿದ್ದರು. ಈ ವರ್ಷ ಜ.06 ಹಾಗೂ 07 ರಂದು ಈ ರಜೆಯನ್ನುನೀಡಲಾಗಿತ್ತು.

Join Whatsapp