ಅಸ್ಸಾಮ್ ಪ್ರವಾಹ | 9 ಕ್ಕೇರಿದ ಸಾವಿನ ಸಂಖ್ಯೆ; ಸಂತ್ರಸ್ತರಾದ 6 ಲಕ್ಷ ಮಂದಿ

Prasthutha|

ಗುವಾಹಟಿ: ಈಶಾನ್ಯ ರಾಜ್ಯ ಅಸ್ಸಾಂನಲ್ಲಿ ಮಳೆ ಮುಂದುವರಿದಿದ್ದು, 27 ಜಿಲ್ಲೆಗಳಲ್ಲಿ 6 ಲಕ್ಷಕ್ಕೂ ಅಧಿಕ ಜನರು ನಿರಾಶ್ರಿತರಾಗಿದ್ದಾರೆ. ಈ ಮಧ್ಯೆ ಒಟ್ಟು ಸಾವಿನ ಸಂಖ್ಯೆ 9 ಕ್ಕೇರಿದೆ.

- Advertisement -

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬರಾಕ್ ಕಣಿವೆ ಮತ್ತು ದಿಮಾ ಹಸಾವೊ ಜಿಲ್ಲೆಯಲ್ಲಿ ಭೂಕುಸಿತ ಉಂಟಾಗಿದ್ದು, ರೈಲು ಮತ್ತು ರಸ್ತೆ ಸಂಪರ್ಕ ಕಡಿತಗೊಂಡಿದೆ.

ನಾಗಾವ್ ಎಂಬ ಜಿಲ್ಲೆಯು ಅತ್ಯಂತ ಹೆಚ್ಚು ಬಾಧಿತ ಜಿಲ್ಲೆಯಾಗಿದ್ದು, ಸುಮಾರು 2.88 ಲಕ್ಷ ಜನರು ಬಾಧಿತರಾಗಿದ್ದಾರೆ. ಅಸ್ಸಾಮ್ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಕ್ಯಾಚಾರ್ ಜಿಲ್ಲೆಯಲ್ಲಿ ಸುಮಾರು 1.19 ಲಕ್ಷ ಜನರು ಹಾನಿಗೊಳಗಾಗಿದ್ದಾರೆ. ಅಲ್ಲದೆ, ಹೊಜಾಯ್ ನಲ್ಲಿ 1.07 ಲಕ್ಷ, ದರ್ರಾಂಗ್ ನಲ್ಲಿ 60562, ಬಿಸ್ವನಾಥ್ ನಲ್ಲಿ 27282 ಮತ್ತು ಉದಯ್ ಗುರಿ ಜಿಲ್ಲೆಯಲ್ಲಿ 19755 ಜನರು ಸಂತ್ರಸ್ತರಾಗಿದ್ದಾರೆ.

- Advertisement -

ಅಸ್ಸಾಂನ ವಿವಿಧ ಜಿಲ್ಲೆಗಳಲ್ಲಿ 135 ಪರಿಹಾರ ಶಿಬಿರಗಳನ್ನು 48000 ಕ್ಕೂ ಅಧಿಕ ಜನರು ಆಶ್ರಯ ಪಡೆದಿದ್ದಾರೆ.

ಘಟನೆಯ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಹಿಮಂತ ಬಿಸ್ವಾ, ದಕ್ಷಿಣ ಅಸ್ಸಾಮ್ ಗೆ ಸಂಪರ್ಕವನ್ನು ಪುನಃಸ್ಥಾಪಿಸಲು ಪ್ರಯತ್ನಗಳನ್ನು ನಡೆಸಲಾಗುತ್ತಿವೆ ಮತ್ತು ದಿಮಾ ಹಸಾವೊದಲ್ಲಿ 4 ಮೆಟ್ರಿಕ್ ಟನ್ ಆಹಾರವನ್ನು ಹೆಲಿಕಾಪ್ಟರ್ ಮೂಲಕ ಪೂರೈಸಲಾಗಿದೆ ಎಂದು ತಿಳಿಸಿದ್ದಾರೆ.

ರೈಲು ಸಂಪರ್ಕವನ್ನು ಮತ್ತೆ ಸ್ಥಾಪಿಸಲು ಸುಮಾರು 45 ದಿನಗಳನ್ನು ಬೇಕಾಗಿದೆ. ಆದರೆ ರಸ್ತೆ ಸಂಪರ್ಕವು ಮುಂದಿನ ಎರಡು – ಮೂರು ದಿನಗಳಲ್ಲಿ ಸರಿಯಾಗಲಿದೆ. ಪ್ರವಾಹ ಪರಿಹಾರ ನಿಧಿಯಿಂದ ಕೇಂದ್ರ ಸರ್ಕಾರ 1000 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ ಎಂದು ಅವರು ತಿಳಿಸಿದ್ದಾರೆ.

ಭಾರತೀಯ ಸೇನೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಅಗ್ನಿಶಾಮಕ ಮತ್ತು ತುರ್ತು ಸೇವಾ ತಂಡಗಳು ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆ ವಿವಿಧ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಸುಮಾರು 8054 ಜನರನ್ನು ಯಶಸ್ವಿಯಾಗಿ ರಕ್ಷಿಸಿವೆ.



Join Whatsapp