ದ್ವೇಷ ಭಾಷಣ ಮಾಡಿದ ಅಸ್ಸಾಂ ಸಿಎಂ ಬಿಸ್ವಾ ಶರ್ಮಾ

Prasthutha|

ಅಸ್ಸಾಂ: ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರಗಳು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಪರಿಗಣಿಸದೆ ಬಾಂಗ್ಲಾದೇಶ ಮೂಲದ ಅಲ್ಪಸಂಖ್ಯಾತ ಸಮುದಾಯದ ಸದಸ್ಯರು ಈ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಮತ ನೀಡಿದ್ದಾರೆ. ಅಸ್ಸಾಂನಲ್ಲಿ ಕೋಮುವಾದದಲ್ಲಿ ತೊಡಗಿರುವ ಏಕೈಕ ಸಮುದಾಯವೂ ಅದಾಗಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ದ್ವೇಷದ ಮತ್ತು ಪ್ರಚೋದಕ ಹೇಳಿಕೆ ಹೇಳಿದ್ದಾರೆ.

- Advertisement -

ಪಕ್ಷದ ರಾಜ್ಯ ಕೇಂದ್ರ ಕಚೇರಿಯಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ವಿಜೇತ ಅಭ್ಯರ್ಥಿಗಳ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಸ್ಸಾಂನಲ್ಲಿ ಯಾರಾದರೂ ಕೋಮುವಾದವನ್ನು ನಡೆಸಿದರೆ ಅದು ಒಂದೇ ಸಮುದಾಯ, ಒಂದು ಧರ್ಮ. ಬೇರೆ ಯಾವುದೇ ಧರ್ಮದವರು ಅದನ್ನು ಮಾಡುವುದಿಲ್ಲ ಎಂದು ದ್ವೇಷ ಭಾಷಣ ಮಾಡಿದ್ದಾರೆ. ಈ ಮೂಲಕ ಲೋಕಸಭಾ ಚುನಾವಣೆ ನಂತರವೂ ಬಿಜೆಪಿ ನಾಯಕರ ದ್ಷೇಷ ಭಾಷಣ ಮುಂದುವರಿದಿದೆ.

ಕರೀಂಗಂಜ್ ಹೊರತುಪಡಿಸಿ, ಬಾಂಗ್ಲಾದೇಶ ಮೂಲದ ಅಲ್ಪಖ್ಯಾತರನ್ನು ಹೊಂದಿರುವ ಕೇಂದ್ರಗಳನ್ನು ನಾವು ಪರಿಗಣಿಸಿದರೆ, ಶೇಕಡಾ 99 ರಷ್ಟು ಮತಗಳು ಕಾಂಗ್ರೆಸ್‌ಗೆ ಬಂದಿವೆ ಎಂದು ಅವರು ಹೇಳಿದರು.

- Advertisement -

ಅವರು (ಅಲ್ಪಸಂಖ್ಯಾತ ಜನರು) ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ಮನೆಗಳಲ್ಲಿ ವಾಸಿಸುತ್ತಿರಬಹುದು, ಮೋದಿ ಅವರು ಒದಗಿಸಿದ ವಿದ್ಯುತ್ ಮತ್ತು ನೈರ್ಮಲ್ಯ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಾರೆ. ಆದರೆ ಅವರು ಮತ ಚಲಾಯಿಸಲು ಹೋದಾಗ ಅವರು ಕಾಂಗ್ರೆಸ್‌ಗೆ ಮತ ಹಾಕುತ್ತಾರೆ ಎಂದು ಶರ್ಮಾ ಹೇಳಿದ್ದಾರೆ.

ಬಾಂಗ್ಲಾದೇಶ ಮೂಲದ ಸಮುದಾಯವು ಕಾಂಗ್ರೆಸ್‌ಗೆ ಮತ ಹಾಕುತ್ತದೆ. ಏಕೆಂದರೆ, ಅವರು ಮುಂದಿನ 10 ವರ್ಷಗಳಲ್ಲಿ ರಾಜ್ಯವನ್ನು ನಿಯಂತ್ರಿಸಲು ಬಯಸುತ್ತಾರೆ ಎಂದು ಅವರು ಸಮರ್ಥಿಸಿಕೊಂಡರು.

ಮಾದರಿ ನೀತಿ ಸಂಹಿತೆ (ಎಂಸಿಸಿ) ಜಾರಿಯಲ್ಲಿರುವಾಗಿನಿಂದ ಬಿಜೆಪಿ ಸರ್ಕಾರ ನಿಷ್ಕ್ರಿಯವಾಗಿದ್ದಾಗ ಸಮುದಾಯದ ಸದಸ್ಯರು ಬಾರ್ಪೇಟಾದ ಹಳ್ಳಿಯಾದ ಲಖಿಂಪುರದ ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಿದರು.ಕೊಕ್ರಜಾರ್‌ನಲ್ಲಿ ಭೂಮಿಯನ್ನು ಅತಿಕ್ರಮಿಸಲು ಪ್ರಯತ್ನಿಸಿದರು ಎಂದು ಶರ್ಮಾ ಆರೋಪಿಸಿದ್ದಾರೆ.



Join Whatsapp