ಗುವಾಹಟಿ: ಅಸ್ಸಾಂನಲ್ಲಿ ನಡೆಯಲಿರುವ ಉಪಚುನಾವಣೆಗಳಲ್ಲಿ ಐದು ಕ್ಷೇತ್ರದ ನಾಲ್ಕರಲ್ಲಿ ಕಾಂಗ್ರೆಸ್ ಅನ್ನು ಬೆಂಬಲಿಸುವುದಾಗಿ ಸಿಪಿಎಂ ಹೇಳಿದೆ. ಸಿಪಿಎಂ ಅಕ್ಟೋಬರ್ 30 ರಂದು ನಡೆಯುವ ಚುನಾವಣೆಯ ಉಳಿದ ಒಂದು ಕ್ಷೇತ್ರದಲ್ಲಿ ಸಿಪಿಐ ಅನ್ನು ಬೆಂಬಲಿಸಲಿದೆ.
ವಿಧಾನಸಭೆ ಚುನಾವಣೆಯ ನಂತರ ಬಿಜೆಪಿ ನೇತೃತ್ವದ ಸರ್ಕಾರ ಅಸ್ಸಾಂ ಜನರಿಗೆ ಮೋಸ ಮಾಡಿದೆ. ಸರ್ಕಾರವು ನಿರುದ್ಯೋಗ ಅಥವಾ ರಾಜ್ಯದ ಹಣದುಬ್ಬರಕ್ಕೆ ಏನೂ ಪರಿಹಾರ ಹುಡುಕಲಿಲ್ಲ. ಬಿಜೆಪಿ ಅಥವಾ ಅವರ ಮಿತ್ರ ಪಕ್ಷ ಅಸ್ಸಾಂ ಗಣ ಪರಿಷತ್ ಅಥವಾ ಯುಪಿಪಿಎಲ್ ಗೆ ಮತ ನೀಡಬೇಡಿ ಎಂದು ಸಿಪಿಎಂ ಹೇಳಿಕೆಯಲ್ಲಿ ತಿಳಿಸಿದೆ.
ಈ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಸಿಪಿಎಂ ಕಾಂಗ್ರೆಸ್ ನೇತೃತ್ವದ ಮಹಾ ಮೈತ್ರಿಯ ಭಾಗವಾಗಿತ್ತು.