ವಿವಾದಿತ AFSPA ಕಾಯ್ದೆಯನ್ನು ಮತ್ತೆ ಆರು ತಿಂಗಳು ವಿಸ್ತರಿಸಿದ ಅಸ್ಸಾಮ್ ಸರ್ಕಾರ

Prasthutha|

ಗುವಾಹಟಿ: ಅಸ್ಸಾಮ್ ಸರ್ಕಾರ ಯಾವುದೇ ಕಾರಣವನ್ನು ನೀಡದೆ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ (AFSPA) ಅನ್ನು ರಾಜ್ಯದಲ್ಲಿ ಮತ್ತೆ ಆರು ತಿಂಗಳ ಅವಧಿಗೆ ವಿಸ್ತರಿಸಿದೆ.

- Advertisement -

ಕಠಿಣ ಕಾನೂನನ್ನು ಮೊದಲ ಬಾರಿಗೆ ಅಸ್ಸಾಮ್ ನಲ್ಲಿ ನವೆಂಬರ್ 1990 ರಲ್ಲಿ ಜಾರಿಗೆ ತರಲಾಗಿತ್ತು ಮತ್ತು ರಾಜ್ಯ ಸರ್ಕಾರದ ಪರಿಶೀಲನೆಯ ನಂತರ ಪ್ರತಿ ಆರು ತಿಂಗಳಿಗೊಮ್ಮೆ ವಿಸ್ತರಿಸುತ್ತಾ ಬಂದಿದೆ. ಅಸ್ಸಾಮ್ ಸರ್ಕಾರ 1958 ಸಶಸ್ತ್ರ ಪಡೆಗಳ ಕಾಯ್ದೆ ಅಡಿಯಲ್ಲಿ ಇಡೀ ರಾಜ್ಯವನ್ನು ಸಂಕಷ್ಟಕ್ಕೊಳಗಾದ ಪ್ರದೇಶವೆಂದು ಘೋಷಿಸಿತ್ತು.

ಭಯೋತ್ಪಾದನೆಯನ್ನು ನಿಗ್ರಹಿಸುವ ನೆಪದಲ್ಲಿ ಅನುಮಾನದ ಆಧಾರದಲ್ಲಿ ರಾಜ್ಯದ ಯಾವುದೇ ಪ್ರಜೆಗೆ ಗುಂಡಿಕ್ಕುವ ಮತ್ತು ಬಂಧಿಸುವ ಪರಮಾಧಿಕಾರವನ್ನು AFSPA ಕಾಯ್ದೆಯಡಿ ಭದ್ರತಾ ಪಡೆಗಳಿಗೆ ನೀಡಲಾಗಿದೆ ಎಂದು ರಾಜ್ಯದ ನಾಗರಿಕರು ಆರೋಪಿಸಿದ್ದಾರೆ. 1980 ರಲ್ಲಿ ಜನಾಂಗೀಯ ದಂಗೆಗಳು ಭುಗಿಲೆದ್ದ ನಂತರ ಅಸ್ಸಾಮ್ ನಲ್ಲಿ ಸಶಸ್ತ್ರ ಪಡೆಗಳಿಗೆ ವಿಶೇಷ ಅಧಿಕಾರ (AFSPA) ಕಾಯ್ದೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ.

Join Whatsapp