ಕತ್ತೆ, ಕತ್ತೆಯಾಗಿಯೇ ಉಳಿಯುತ್ತದೆ ಅದು ಜೀಬ್ರಾವಾಗಲ್ಲ: ಯುಕೆ ವಿರುದ್ಧ ಇಮ್ರಾನ್ ಖಾನ್ ಕಾಮೆಂಟ್ಸ್ ವೈರಲ್

Prasthutha|

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತೆ ವಿಭಿನ್ನ ರೀತಿಯಲ್ಲಿ ಸುದ್ದಿಯಾಗಿದ್ದು  ಯುಕೆ ರಾಷ್ರ್ಟವನ್ನು ಕತ್ತೆಗೆ ಹೋಲಿಸಿ ಮಾತಾಡಿದ ತುಣುಕೊಂದು ಈಗ ವೈರಲ್ ಆಗಿದೆ

- Advertisement -

ಅವರ ರೆಕಾರ್ಡಿಂಗ್ ನ ತುಣುಕುಗಳು ಸಾಮಾಜಿಕ ತಾಣಗಳಲ್ಲಿ ಪ್ರಸಾರವಾಗುತ್ತಿದ್ದು ಅದರಲ್ಲಿ ಅವರು ಯುನೈಟೆಡ್ ಕಿಂಗ್ಡಮ್ ನಲ್ಲಿ ತಮ್ಮ ಜೀವನವನ್ನು ವಿವರಿಸುತ್ತಿರುವಾಗ ಅದರ ಒಂದು ನಿರ್ದಿಷ್ಟ ಭಾಗವೊಂದು ನೆಟ್ಟಿಗರ ಗಮನವನ್ನು ಸೆಳೆದಿದೆ.

“ಯುಕೆಯಲ್ಲಿ ನನಗೆ ತುಂಬಾ ಸ್ವಾಗತವಿತ್ತು ಆದರೆ ನಾನು ಎಂದಿಗೂ ಅದನ್ನು ನನ್ನ ಮನೆ ಎಂದು ಪರಿಗಣಿಸಲಿಲ್ಲ. ನಾನು ಯಾವಾಗಲೂ ಮೊದಲು ಪಾಕಿಸ್ತಾನಿ. ಕತ್ತೆಯು ಅದರ ಮೇಲೆ ಪಟ್ಟೆಗಳನ್ನು ಚಿತ್ರಿಸುವುದರಿಂದ ಜೀಬ್ರಾವಾಗಿ ಬದಲಾಗುವುದಿಲ್ಲ. ಕತ್ತೆ ಕತ್ತೆಯಾಗಿಯೇ ಉಳಿಯುತ್ತದೆ” ಎಂದು ಖಾನ್ ಈಗ ವೈರಲ್ ಆಗಿರುವ ಕ್ಲಿಪ್ ನಲ್ಲಿ ಹೇಳುತ್ತಿರುವುದು ಕೇಳಿ ಬರುತ್ತಿದೆ.

- Advertisement -

ಇದು ಪಾಕಿಸ್ತಾನ ಮೂಲದ ಕಂಟೆಂಟ್ ಕ್ರಿಯೇಟರ್ ಜುನೈದ್ ಅಕ್ರಮ್ ಅವರೊಂದಿಗಿನ ಪಾಡ್ಕಾಸ್ಟ್ ನ  ಒಂದು ಭಾಗವಾಗಿದ್ದು ಇತರೆ ಕಂಟೆಂಟ್ ಕ್ರಿಯೇಟರ್ ಗಳಾದ ಮುಜಮ್ಮಿಲ್ ಹಸನ್ ಮತ್ತು ತಲ್ಹಾ ಕೂಡ ಪಾಡ್ ಕಾಸ್ಟ್ ನ ಭಾಗವಾಗಿದ್ದರು ಎನ್ನಲಾಗಿದೆ. ಇದರ ಸಂಪೂರ್ಣ ವೀಡಿಯೊವನ್ನು ಖಾನ್ ಅವರ ಅಧಿಕೃತ ಯೂಟ್ಯೂ ಚಾನೆಲ್ ನಲ್ಲಿ ಅಪ್ಲೋಡ್ ಮಾಡಲಾಗಿದೆ.

ಏಪ್ರಿಲ್ 10 ರಂದು ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಪ್ರತಿಪಕ್ಷಗಳು ಮಂಡಿಸಿದ ಅವಿಶ್ವಾಸ ನಿರ್ಣಯದ ಮೂಲಕ ಇಮ್ರಾನ್ ಖಾನ್ ಅವರನ್ನು ಪ್ರಧಾನಿ ಸ್ಥಾನದಿಂದ ತೆಗೆದುಹಾಕಲಾಗಿದ್ದು ಪಾಕಿಸ್ತಾನದಲ್ಲಿ ಆಡಳಿತವನ್ನು ತರಲು ತನ್ನ ರಾಜಕೀಯ ವಿರೋಧಿಗಳು ಅಮೆರಿಕದೊಂದಿಗೆ ಶಾಮೀಲಾಗಿದ್ದಾರೆ ಎಂದು ಮಾಜಿ ಪ್ರಧಾನಿ ಪದೇ ಪದೇ ಆರೋಪಿಸಿದ್ದಾರೆ.



Join Whatsapp