ಮುಂಬೈ: ಹಣದುಬ್ಬರ, ನಿರುದ್ಯೋಗದಂತಹ ಸಮಸ್ಯೆಗಳ ಕುರಿತು ಮೋದಿಯನ್ನು ಪ್ರಶ್ನಿಸಬೇಕೇ ಹೊರತು ಪದವಿ ವಿಷಯ ಬಿಟ್ಟುಬಿಡಿ ಎಂದು ಎನ್’ಸಿಪಿ – ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ನಾಯಕ ಅಜಿತ್ ಪವಾರ್ ಹೇಳಿದ್ದಾರೆ.
“ಅವರು ಒಂಬತ್ತು ವರ್ಷಗಳಿಂದ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ. ಈಗ ಅವರ ಡಿಗ್ರಿ ಕೇಳುವುದು ಸರಿಯಾಗದು. ನಾವು ಹಣದುಬ್ಬರ, ನಿರುದ್ಯೋಗದಂತಹ ಸಮಸ್ಯೆಗಳ ಸಂಬಂಧ ಮೋದಿಯವರನ್ನು ಪ್ರಶ್ನಿಸಬೇಕು.” ಅವರು ಹೇಳಿದರು.
“ಅವರ ಪದವಿಯ ಬಗ್ಗೆ ತಿಳಿದರೆ ಹಣದುಬ್ಬರ ಕಡಿಮೆಯಾಗುತ್ತದೆಯ? ಪ್ರಧಾನಿಯ ಪದವಿ ತಿಳಿದರೆ ಜನರಿಗೆ ಕೆಲಸ ಸಿಗುತ್ತದೆಯೇ?” ಅವರು ಪ್ರಶ್ನಿಸಿದರು.
ಪ್ರಧಾನಿ ಕಾಲೇಜು ಡಿಗ್ರಿಯನ್ನು ಡೊಮೈನ್ ನಲ್ಲಿ ಹಾಕಲಿ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಹೇಳಿದ್ದರು
“ದೇಶದ ಜನರಿಗೆ ನಮ್ಮ ಪ್ರಧಾನಿ ಎಷ್ಟು ಓದಿದ್ದಾರೆ ಎಂದು ತಿಳಿಯುವ ಹಕ್ಕು ಇಲ್ಲವೇ? ಅವರು ತನ್ನ ಪದವಿ ತೋರಿಸುವುದಕ್ಕಲ್ಲ ಎಂಬಂತೆ ಕೋರ್ಟಿನಲ್ಲಿ ನಡೆದುಕೊಂಡರು. ಯಾರು ಅವರ ಡಿಗ್ರಿ ಕೇಳುತ್ತಾರೋ ಅವರಿಗೆ ದಂಡ ಹಾಕುತ್ತಾರೆ. ಇಲ್ಲಿ ಏನು ನಡೆಯುತ್ತಿದೆ. ಅನಕ್ಷರಸ್ಥ ಇಲ್ಲವೇ ಕಡಿಮೆ ತಿಳಿದ ಪ್ರಧಾನಿ ದೇಶಕ್ಕೆ ಅಪಾಯಕಾರಿ” ಎಂದು ಕೇಜ್ರೀವಾಲ್ ಹೇಳಿದ್ದರು.
ಪ್ರಧಾನಿ ಮೋದಿಯವರ ಯಾವುದೇ ಪದವಿಯನ್ನು ಗುಜರಾತ್ ಹೈಕೋರ್ಟಿಗೆ ಸಲ್ಲಿಸಬೇಕಾಗಿಲ್ಲ ಎಂದು ಪ್ರಧಾನಿ ಕಚೇರಿಯು ಹೇಳಿದೆ.
ಏಕ ಸದಸ್ಯ ನ್ಯಾಯಾಧೀಶರ ಪೀಠದ ಜಡ್ಜ್ ಬೀರೇನ್ ವೈಷ್ಣವ್ ಅವರು ಆ ಬಗ್ಗೆ ಗುಜರಾತ್ ವಿವಿ ಮತ್ತು ದಿಲ್ಲಿ ವಿವಿಗೆ ಪ್ರಧಾನಿ ಕಚೇರಿಯ ಮಾಹಿತಿ ನೀಡಿದರು.
ಸಿಐಸಿ – ಮುಖ್ಯ ಮಾಹಿತಿ ಆಯೋಗದ ಮಾಹಿತಿ ಕೇಳಿಕೆಯನ್ನು ಪ್ರಶ್ನಿಸಿ ಗುಜರಾತ್ ವಿವಿಯು ಸಲ್ಲಿಸಿದ ಅರ್ಜಿಯು ವಿಚಾರಣೆಗೆ ಬರುತ್ತಿದೆ.
ಪದವಿ ಕೇಳಿದ್ದಕ್ಕೆ ಗುಜರಾತ್ ಹೈಕೋರ್ಟ್ ದಿಲ್ಲಿ ಮುಖ್ಯಮಂತ್ರಿಗೆ ರೂ. 25,000 ದಂಡ ವಿಧಿಸಿದೆ.
ಪ್ರಧಾನಿಯವರ ಪದವಿ ವಿಷಯವು ಕೋರ್ಟಿಗೆ ಹೋದ ಬಗ್ಗೆ ಆ ಮೊದಲು ಕಾಂಗ್ರೆಸ್ ನಾಯಕ ಪವನ್ ಖೇರ ಅಚ್ಚರಿ ವ್ಯಕ್ತಪಡಿಸಿದ್ದರು.
“ಈ ವಿಷಯ ಕೋರ್ಟಿಗೆ ಯಾಕೆ ಹೋಯಿತು. ಅವರು ತುಂಬ ಒತ್ತಡದಲ್ಲಿದ್ದಾರೆ. ಪ್ರಧಾನಿಯವರ ಪದವಿ ಅಸಲಿಯೇ ನಕಲಿಯೇ ಬೇರೆ ವಿಷಯ. ಅದು ಕೋರ್ಟ್ ಮೆಟ್ಟಿಲೇರುವುದು ಅಚ್ಚರಿ ಎಂದು ಪವನ್ ಖೇರ ಪತ್ರಿಕಾಗೋಷ್ಠಿ ನಡೆಸಿ ಹೇಳಿದ್ದರು.