ಮೈಸೂರು: ನಾನು ವಿಷ ಹಾಕಿದ್ದೇನೆ ಎಂದು ಕುಮಾರಸ್ವಾಮಿ ಪದೇ ಪದೇ ಹೇಳುತ್ತಾರೆ. ನಾನು ಯಾವ ವಿಷ ಹಾಕಿದ್ದೀನಿ ಎಂದು ಅವರನ್ನು ಕೇಳಬೇಕು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಜೈ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶ ನಡೆಯುತ್ತಿದ್ದು, ಸಮಾವೇಶದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾತನಾಡಿದರು.
ನಿಮ್ಮ ಸರಕಾರ ಬೀಳಿಸಿದವರನ್ನೇ ಆತ ಚುಂಚನಗಿರಿ ಮಠಕ್ಕೆ ಕರೆದು ಕೊಂಡು ಹೋಗಿದ್ದೀರಿ. ನಿಮಗೆ ಮಾನ ಮಾರ್ಯಾದೆ ಬೇಡ್ವಾ ಎಂದು ಕುಮಾರಸ್ವಾಮಿಯವರನ್ನು ಕಿಚಾಯಿಸಿದ್ದಾರೆ.
ಸೂರ್ಯ ಮುಳುಗುವುದು ನಿಶ್ಚಿತ ಹೇಗೋ, ಕಮಲ ಬಾಡುವುದು ಅಷ್ಟೆ ನಿಶ್ಚಿತ. ಆಡೋ ಹೈಕ್ಕಳಿಗೆ ಅಧಿಕಾರ ಕೊಟ್ಟರೆ ಗದ್ದೆಗೆ ಹೋಗಿ ಏನೋ ಮಾಡಿದ್ರಂತೆ. ಹಂಗೇ ಜೆಡಿಎಸ್ ವರಿಷ್ಠ ದೇವೇಗೌಡರು ಕುಮಾರಸ್ವಾಮಿಗೆ ಅಧಿಕಾರ ಕೊಟ್ಟರು. ಈಗ ಜೆಡಿಎಸ್ ಅನ್ನು ಕುಮಾರಸ್ವಾಮಿ ಬಿಜೆಪಿಗೆ ಮಾರಿಬಿಟ್ಟಿದ್ದಾರೆ ಎಂದ ಡಿಕೆಶಿ, ಮನೆ ಅಳಿಯನನ್ನು ಬಿಜೆಪಿ ಪಕ್ಷದಿಂದ ಸ್ಪರ್ಧೆಗೆ ಇಳಿಸ್ತಾರಾ? ಇದು ಒಂದು ಪಕ್ಷ ಏನ್ರಿ ಎಂದು ಕಿಚಾಯಿಸಿದ್ದಾರೆ.