ನೇಣು ಬಿಗಿದು ಎಎಸ್’ಐ ಪುತ್ರಿ ಆತ್ಮಹತ್ಯೆ

Prasthutha|

ಮೈಸೂರು; ಸಹಾಯಕ ಸಬ್ ಇನ್ಸ್’ಪೆಕ್ಟರ್ ಪುತ್ರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

- Advertisement -


ನಗರದ ಜಲಪುರಿ ಪೊಲೀಸ್ ವಸತಿಗೃಹದ ಸಿ ಬ್ಲಾಕ್’ನಲ್ಲಿ ವಾಸವಾಗಿದ್ದ ಗಿರಿಜಾ ಲಕ್ಷ್ಮೀ(19) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗಿರಿಜಾಲಕ್ಷ್ಮೀ ಮೈಸೂರು ನಗರದ ಖಾಸಗಿ ಕಾಲೇಜಿನ ಪ್ರಥಮ ಬಿಕಾಂ ವ್ಯಾಸಂಗ ಮಾಡುತ್ತಿದ್ದರು.


ಮೈಸೂರು ನಗರದ ಪೊಲೀಸ್ ವಿಶೇಷ ವಿಭಾಗದ ಸಹಾಯಕ ಸಬ್ ಇನ್ಸ್ ಪೆಕ್ಟರ್ ಗೋಪಿನಾಥ್ ಪುತ್ರಿ ಗಿರಿಜಾಲಕ್ಷ್ಮೀ ಸಂಜೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡಿದ್ದಾಳೆ ಎಂದು ತಿಳಿದುಬಂದಿದೆ.

- Advertisement -


ಹೊರಹೋಗಿದ್ದ ಮನೆಯವರು ವಾಪಸ್ಸಾದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಕೂಡಲೇ ಗಿರಿಜಾ ಲಕ್ಷ್ಮೀಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಅಷ್ಟರೊಳಗೆ ಜೀವ ಹೋಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ನಜರ್ ಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



Join Whatsapp