ಏಷ್ಯನ್ ಪ್ಯಾರಾ ಗೇಮ್ಸ್​ಗೆ ತೆರೆ: 111ಪದಕದೊಂದಿಗೆ ಭಾರತಕ್ಕೆ 5ನೇ ಸ್ಥಾನ

Prasthutha|

- Advertisement -

ಹ್ಯಾಗ್‌ಝೌ: ಏಷ್ಯನ್ ಪ್ಯಾರಾ ಗೇಮ್ಸ್ 2023 ತೆರೆಯೆಳೆದುಕೊಂಡಿದ್ದು, ಭಾರತ ಒಟ್ಟು 111 ಪದಕ ಗಳಿಸುವುದರೊಂದಿಗೆ ಪಟ್ಟಿಯಲ್ಲಿ ದೇಶವು 5ನೇ ಸ್ಥಾನ ಪಡೆದಿದೆ. ಕ್ರೀಡಾಪಟುಗಳು 29 ಚಿನ್ನ, 31 ಬೆಳ್ಳಿ ಮತ್ತು 51 ಕಂಚಿನ ಪದಕಗಳೊಂದಿಗೆ ಈ ಬಾರಿ ಉತ್ತಮ ಸಾಧನೆ ತೋರಿಸಿದ್ದಾರೆ.ಪದಕಗಳಲ್ಲದೆ, ಭಾರತದ ಪ್ಯಾರಾ ಅಥ್ಲೀಟ್‌ಗಳು ಹ್ಯಾಂಗ್‌ಝೌನಲ್ಲಿ ಮೂರು ವಿಶ್ವ ದಾಖಲೆಗಳನ್ನು ಮುರಿದರು. ಗುರ್ಜರ್ ಸುಂದರ್ ಸಿಂಗ್ ಪುರುಷರ ಜಾವೆಲಿನ್ ಥ್ರೋ-ಎಫ್ 46 ವಿಭಾಗದಲ್ಲಿ ಚಿನ್ನದ ಪದಕ ಗೆದ್ದು, 68.60 ಮೀಟರ್​ ಪ್ರಯತ್ನದೊಂದಿಗೆ ಹೊಸ ವಿಶ್ವ ದಾಖಲೆ ಸ್ಥಾಪಿಸಿದರು. ಸುಮಿತ್ ಆಂಟಿಲ್ ಪುರುಷರ ಜಾವೆಲಿನ್ ಥ್ರೋ-ಎಫ್ 64 ರಲ್ಲಿ 73.29 ಮೀಟರ್​ ಪ್ರಯತ್ನದಲ್ಲಿ ಮತ್ತೊಂದು ಹೊಸ ವಿಶ್ವ ದಾಖಲೆ ಸ್ಥಾಪಿಸಿದರು. ಪುರುಷರ ಸಂಯುಕ್ತ ತಂಡವು 158 ಸ್ಕೋರ್‌ನೊಂದಿಗೆ ಮೂರನೇ ವಿಶ್ವ ದಾಖಲೆಗೆ ಕಾರಣವಾಯಿತು. ಇವುಗಳನ್ನು ಹೊರತುಪಡಿಸಿ, ಭಾರತದ ಅಥ್ಲೀಟ್‌ಗಳು ಕ್ರೀಡಾಕೂಟದಲ್ಲಿ ಹಲವು ಏಷ್ಯಾ ಮತ್ತು ಗೇಮ್ಸ್ ನಲ್ಲಿ ದಾಖಲೆಗಳನ್ನು ಮರುಬರೆದಿದ್ದಾರೆ.

ಅ.22 ರಿಂದ 28 ರವರೆಗೆ ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್‌ನ ನಾಲ್ಕನೇ ಆವೃತ್ತಿಗೆ ಭಾರತ 303 ಕ್ರೀಡಾಪಟುಗಳನ್ನು ಕಳೂಹಿಸಿತ್ತು. 191 ಪುರುಷರು ಮತ್ತು 112 ಮಹಿಳೆಯರು. ಪ್ರಸ್ತುತ ಕ್ರೀಡಾಕೂಟದಲ್ಲಿ ಭಾರತ ಚೀನಾ, ಇರಾನ್, ಜಪಾನ್ ಮತ್ತು ರಿಪಬ್ಲಿಕ್ ಆಫ್ ಕೊರಿಯಾವನ್ನು ಹಿಂದಿಕ್ಕಿ ಐದನೇ ಸ್ಥಾನ ಗಳಿಸಿದೆ. ಚೀನಾ 214 ಚಿನ್ನ ಸೇರಿದಂತೆ 521 ಪದಕಗಳನ್ನು ಗೆದ್ದು ಅಗ್ರಸ್ಥಾನವನ್ನು ಅಲಂಕರಿಸಿದೆ.

- Advertisement -

2018 ರ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತ 15 ಚಿನ್ನ ಸೇರಿದಂತೆ ಒಟ್ಟು 72 ಪದಕಗಳನ್ನು ಗಳಿಸಿತ್ತು. ಆಗ 190 ಕ್ರೀಡಾಪಟುಗಳನ್ನು ಕಳುಹಿಸಸಲಾಗಿತ್ತು.



Join Whatsapp