ಏಷ್ಯನ್ ಗೇಮ್ಸ್ 2023: ಪಾಕಿಸ್ತಾನವನ್ನು ಮಣಿಸಿ ಸೆಮಿಫೈನಲ್ ಪ್ರವೇಶಿಸಿದ ಟೀಮ್ ಇಂಡಿಯಾ

Prasthutha|

ಚೀನಾದ ಹಾಂಗ್​ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್​ನ ಪುರುಷ ಹಾಕಿ ಕ್ವಾರ್ಟರ್ ​ಫೈನಲ್​ನಲ್ಲಿ ಪಾಕಿಸ್ತಾನ್ ವಿರುದ್ಧ ಭಾರತ ತಂಡ 10-2 ಅಂತರದಿಂದ ಅಮೋಘ ಗೆಲುವು ದಾಖಲಿಸಿದೆ.

- Advertisement -

ಈ ಗೆಲುವಿನೊಂದಿಗೆ ಭಾರತ ತಂಡ ಸೆಮಿಫೈನಲ್​ಗೇರಿದೆ. ಗೊಂಗ್‌ಶು ಕೆನಾಲ್ ಸ್ಪೋರ್ಟ್ಸ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಆರಂಭದಲ್ಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿತು. ಭಾರತದ ಆಟಗಾರರ ಸಾಂಘಿಕ ಪ್ರದರ್ಶನದಿಂದ ಪಾಕಿಸ್ತಾನ ತಂಡ ಭಾರತದ ಎದುರು ಸೋಲನುಭವಿಸಿದೆ.

Join Whatsapp