ನವದೆಹಲಿ: ಏಶ್ಯನ್ ಚಾಂಪಿಯನ್ಸ್ ಟ್ರೋಫಿಗೆ ಹರ್ಮನ್‌ಪ್ರೀತ್ ಸಿಂಗ್ ನೇತೃತ್ವದ 18 ಸದಸ್ಯರ ಭಾರತೀಯ ಪುರುಷರ ಹಾಕಿ ತಂಡವನ್ನು ಹಾಕಿ ಇಂಡಿಯಾ ಪ್ರಕಟಿಸಿದೆ. ತಂಡದಲ್ಲಿ ಕರ್ನಾಟಕ 28 ವರ್ಷದ ಮುಹಮ್ಮದ್ ರಾಹೀಲ್ ಮೌಸೀನ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ರಾಹೀಲ್ ಈವರೆಗೆ ಭಾರತದ ಪರ 8 ಪಂದ್ಯಗಳನ್ನಾಡಿದ್ದಾರೆ.
ಹರ್ಮನ್‌ಪ್ರೀತ್ ಸಿಂಗ್ ನಾಯಕನಾಗಿ ಮುಂದುವರಿಯಲಿದ್ದು, ಉಪನಾಯಕರಾಗಿ ವಿವೇಕ್ ಸಾಗರ್ ಪ್ರಸಾದ್ ಕಾರ್ಯನಿರ್ವಹಿಸಲಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ ಆಡಿದ 10 ಆಟಗಾರರು ತಂಡಕ್ಕೆ ಆಯ್ಕೆಯಾಗಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ ಬಳಿಕ ನಿವೃತ್ತಿಯಾಗಿರುವ ಪಿ.ಆರ್. ಶ್ರೀಜೇಶ್‌ರಿಂದ ತೆರವಾಗಿರುವ ಮುಖ್ಯ ಗೋಲ್‌ಕೀಪರ್ ಸ್ಥಾನವನ್ನು ಕೃಷ್ಣ ಬಹದ್ದೂರ್ ಪಾಠಕ್‌ಗೆ ನೀಡಲಾಗಿದೆ.