ಮಂಗಳೂರು: ಬೈಕ್ ಅಪಘಾತವಾಗಿ ಕರ್ತವ್ಯ ನಿರತ ಎ ಎಸ್ ಐ ಮೃತ ಪಟ್ಟ ಘಟನೆ ಶುಕ್ರವಾರ ನಡೆದಿದೆ.
- Advertisement -
ಮಂಗಳೂರು ಪೂರ್ವ ಪೊಲೀಸ್ ಠಾಣಾ ಎ ಎಸ್ ಐ ಸದಾಶಿವ ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಕರ್ತವ್ಯದ ವೇಳೆ ಬುಲೆಟ್ ನಲ್ಲಿ ತೆರಳುತ್ತಿರುವ ಸಂದರ್ಭ ಅಪಘಾತವಾಗಿ ಗಂಭೀರ ಗಾಯಗೊಂಡಿದ್ದರು. ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.