ನವದೆಹಲಿ: ಡೀಪ್ ಫೇಕ್ ನಿಯಂತ್ರಣಕ್ಕೆ ಶೀಘ್ರದಲ್ಲೇ ನಿಯಮಗಳನ್ನು ರೂಪಿಸಲಾಗುವುದು ಎಂದು ಕೇಂದ್ರ ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಡೀಪ್ಫೇಕ್ ಕುರಿತು ಸೋಶಿಯಲ್ ಮೀಡಿಯಾ ಕಂಪನಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಮುಂದಿನ ಸುಮಾರು 10 ದಿನಗಳಲ್ಲಿ ನಾವು ಸ್ಪಷ್ಟವಾದ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಎಲ್ಲಾ ಕಂಪನಿಗಳು, ಇಡೀ ಉದ್ಯಮವು ಇದು ವಾಕ್ ಸ್ವಾತಂತ್ರ್ಯವಲ್ಲ ಎಂದು ಅರ್ಥಮಾಡಿಕೊಂಡಿವೆ ಎಂದು ಸ್ಪಷ್ಟಪಡಿಸಿದ್ದಾರೆ.
ಡೀಪ್ ಫೇಕ್ ನಿಜವಾಗಿಯೂ ಸಮಾಜಕ್ಕೆ ಹಾನಿಕಾರಕವಾಗಿದೆ. ಇದರ ನಿಯಂತ್ರಣದ ಅಗತ್ಯವನ್ನು ಅರ್ಥಮಾಡಿಕೊಂಡರು. ನಿಯಮಗಳನ್ನು ರೂಪಿಸಲು ಆರಂಭಿಸುತ್ತೇವೆ. ಡೀಪ್ ಫೇಕ್ ನಿಯಂತ್ರಣಕ್ಕೆ ಶೀಘ್ರದಲ್ಲಿ ನಿಯಮಗಳು ರೂಪುಗೊಳ್ಳಲಿವೆ ಎಂದರು.