ಚೆಕ್ ಬೌನ್ಸ್ ಕೇಸ್‌: ನಟ ನೀನಾಸಂ ಅಶ್ವಥ್ ಬಂಧನ

Prasthutha|

- Advertisement -

ಹಾಸನ: ಚೆಕ್ ಬೌನ್ಸ್ ಪ್ರಕರಣ ಸಂಬಂಧ ಚಲನಚಿತ್ರ ನಟ ನೀನಾಸಂ ಅಶ್ವಥ್ ಅವರನ್ನು ಹಾಸನ ಪೊಲೀಸರು ಬಂಧಿಸಿದ್ದರು. ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ ನ್ಯಾಯಾಧೀಶರ ಬಳಿ ತಪ್ಪೊಪ್ಪಿಕೊಂಡು 25% ರಷ್ಟು ಹಣ ಪಾವತಿಸಿದ ಬಳಿಕ ನಟನನ್ನು ಬಿಡುಗಡೆ ಮಾಡಲಾಗಿದೆ.

ಹಾಸನ ಮೂಲದ ರೋಹಿತ್ ಎಂಬವರಿಂದ ನಟ ಅಶ್ವಥ್ ಹಸುಗಳನ್ನ ಖರೀದಿ ಮಾಡಿ 1.5 ಲಕ್ಷದ ಚೆಕ್ ನೀಡಿದ್ದರು. ರೋಹಿತ್ ಬ್ಯಾಂಕ್‌ಗೆ ಚೆಕ್ ಹಾಕಿದಾಗ ಬೌನ್ಸ್ ಆಗಿತ್ತು. ಈ ಸಂಬಂಧ ರೋಹಿತ್ ಹಾಸನದ ಜೆಎಂಎಫ್‌ಸಿ‌ ಕೋರ್ಟ್‌ನಲ್ಲಿ‌ ಕೇಸ್ ಹಾಕಿದ್ದು, ಕೋರ್ಟ್ ನಾಲ್ಕು ಬಾರಿ ಅರೆಸ್ಟ್ ವಾರೆಂಟ್ ಹೊರಡಿಸಿತ್ತು.

- Advertisement -

ನಾಲ್ಕೂ ಬಾರಿಯೂ ನಟ ಅಶ್ವಥ್ ಕೋರ್ಟ್‌ಗೆ ಹಾಜರಾಗಿರಲಿಲ್ಲ. ಐದನೇ ಬಾರಿಗೆ ಅರೆಸ್ಟ್ ವಾರೆಂಟ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ಹಾಸನ ಬಡಾವಣೆ ಠಾಣೆ ಪೊಲೀಸರು ಶನಿವಾರ ರಾತ್ರಿ ಅಶ್ವಥ್‌ ಅವರನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು

Join Whatsapp