ಒಮಿಕ್ರಾನ್ ಪತ್ತೆಯಾಗಿರುವ ದೇಶಗಳ ಸ್ಥಿತಿ ನೋಡಿಕೊಂಡು ಮುಂದಿನ ಕ್ರಮ: ಅಶ್ವಥ್ ನಾರಾಯಣ

Prasthutha|

ಬೆಂಗಳೂರು: ಒಮಿಕ್ರಾನ್ ಪತ್ತೆಯಾಗಿರುವ 11 ದೇಶಗಳ ಸ್ಥಿತಿ ನೋಡಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಅಶ್ವಥ್ ನಾರಾಯಣ ಹೇಳಿದ್ದಾರೆ.

- Advertisement -


ಕರ್ನಾಟಕದ ಇಬ್ಬರಿಗೆ ಒಮಿಕ್ರಾನ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಎರಡು ಒಮಿಕ್ರಾನ್ ಪ್ರಕರಣ ಪತ್ತೆಯಾಗಿದೆ. ಸೋಂಕಿತರ ಜಿನೋಮಿಕ್ ಸೀಕ್ವೆನ್ ಗೆ ಕಳಿಸಲಾಗಿತ್ತು. ಸೋಂಕಿತರ ಸಂಪರ್ಕಿತರ ಪತ್ತೆ ಹಚ್ಚಿ ಚಿಕಿತ್ಸೆ ನೀಡಲಾಗುತ್ತಿದೆ.

ಒಮಿಕ್ರಾನ್ ವೈರಸ್ ಕುರಿತು ಅಧ್ಯಯನ ಮಾಡಲಾಗಿದೆ. 11 ದೇಶಗಳ ಸ್ಥಿತಿಗತಿ ನೋಡಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು. ಒಮಿಕ್ರಾನ್ ವೇಗವಾಗಿ ಹರಡುತ್ತಿದೆ. ಒಮಿಕ್ರಾನ್ ಜೀವಕ್ಕೆ ಅಪಾಯವಿಲ್ಲ. ಒಮಿಕ್ರಾನ್ ವೈರಸ್ ಕುರಿತು ಸರ್ಕಾರ ಕಟ್ಟೆಚ್ಚರ ವಹಿಸಿದೆ ಎಂದಿದ್ದಾರೆ.



Join Whatsapp