ಸಿಎಂ ಪುತ್ರ ಯತೀಂದ್ರ ವಿರುದ್ಧ ಕ್ರಮಕ್ಕೆ ಅಶ್ವತ್ಥ ನಾರಾಯಣ ಆಗ್ರಹ

Prasthutha|

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಆಡಳಿತದಲ್ಲಿ ಹಸ್ತಕ್ಷೇಪ ಮಾಡಿರುವುದಕ್ಕೆ ವೈರಲ್ ಆಗಿರುವ ವಿಡಿಯೋ ನಿದರ್ಶನವಾಗಿದ್ದು, ಕೂಡಲೇ ಯತೀಂದ್ರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಡಿಸಿಎಂ ಡಾ. ಅಶ್ವತ್ಥ ನಾರಾಯಣ ಆಗ್ರಹಿಸಿದ್ದಾರೆ.

- Advertisement -


ಮಲ್ಲೇಶ್ವರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮತ್ತೊಮ್ಮೆ ವೈ ಎಸ್ ಟಿ ಅನ್ನೋದು ಸುದ್ದಿಯಲ್ಲಿದೆ. ಚುನಾಯಿತ ಪ್ರತಿನಿಧಿ ಅಲ್ಲದವರ ಎಟಿಎಂ ಸರ್ಕಾರ ಆಗಿದೆ. ತಂದೆಯ ಹೆಸರಲ್ಲಿ ಅಧಿಕಾರ ದುರ್ಬಳಕೆ ಆಗುತ್ತಿದೆ. ಈ ರೀತಿಯ ವ್ಯವಸ್ಥೆಗೆ ಕಣ್ಣ ಮುಂದೆಯೇ ಸಾಕ್ಷಿ ಇದೆ. ಈ ಸಂಬಂಧ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಕಾನೂನಿನ ಬಗ್ಗೆ ಮಾತನಾಡೋ ಸಿದ್ದರಾಮಯ್ಯ ಈಗ ಏನು ಹೇಳ್ತಾರೆ ಎಂದು ಪ್ರಶ್ನಿಸಿದ್ದಾರೆ.



Join Whatsapp