ಅವಕಾಶ ಕೊಟ್ಟರೆ ನಾನೂ ಮಾಡ್ತೀನಿ: ವಿಪಕ್ಷ ನಾಯಕ ಸ್ಥಾನ ಆಕಾಂಕ್ಷೆ ಹೊರಹಾಕಿದ ಅಶ್ವಥ್ ನಾರಾಯಣ್

Prasthutha|

ಬೆಂಗಳೂರು: ನಮ್ಮಲ್ಲಿ ವಿರೋಧ ಪಕ್ಷದ ನಾಯಕನಾಗಲು ಯಾವುದೇ ಆಕಾಂಕ್ಷಿಗಳಿಲ್ಲ. ಹೈಕಮಾಂಡ್ ಹೇಳಿದವರಿಗೆ ಸ್ಥಾನ ಸಿಗಲಿದೆ. ಅವಕಾಶ ಕೊಟ್ಟರೆ ನಾನು ಮಾಡ್ತೀನಿ ಎಂದು ಪರೋಕ್ಷವಾಗಿ ವಿಪಕ್ಷ ಸ್ಥಾನದ ಆಕಾಂಕ್ಷೆಯನ್ನು ಮಾಜಿ ಡಿಸಿಎಂ ಅಶ್ವಥ್ ನಾರಾಯಣ್ ಹೊರಹಾಕಿದ್ದಾರೆ.

- Advertisement -

ಬೆಂಗಳೂರಿನಲ್ಲಿ ಮಾತನಾಡಿದ ಅಶ್ವಥ್ ನಾರಾಯಣ್, ನಮಗೆ ವಿರೋಧ ಪಕ್ಷದ ನಾಯಕನ ಆಯ್ಕೆಗೆ ಅರ್ಜೆಂಟ್ ಇರಲಿಲ್ಲ. ಅಧಿವೇಶನ ಆರಂಭ ಆಗಲಿದೆ. ಹೀಗಾಗಿ ನಾಳೆಯೊಳಗೆ ವಿರೋಧ ಪಕ್ಷದ ನಾಯಕ ಘೋಷಣೆ ಆಗಲಿದೆ. ಹೈಕಮಾಂಡ್ ಅವಕಾಶ ಕೊಟ್ಟರೆ ನಾನು ಕೂಡಾ ಮಾಡುತ್ತೇನೆ ಎಂದಿದ್ದಾರೆ.

- Advertisement -

ಕಾಂಗ್ರೆಸ್ ಗ್ಯಾರಂಟಿ ಘೋಷಣೆ ಮಾಡಿ ಜನರ ಮತ ಪಡೆದು ಮಾತು ತಪ್ಪಿದೆ. ಗ್ಯಾರಂಟಿಗಳಿಗೆ ಕಂಡೀಶನ್ ಹಾಕಿ ದಿನಾಂಕಗಳನ್ನು ಮುಂದಕ್ಕೆ ಹಾಕ್ತಿದ್ದಾರೆ. ಕೇಂದ್ರ ಸರ್ಕಾರದ 5 ಕೆಜಿ ಸೇರಿ 10 ಕೆಜಿ ಅಂತ ಹೇಳಿರಲಿಲ್ಲ. ನಾವು 10 ಕೆಜಿ ಅಕ್ಕಿ ಕೊಡ್ತೀವಿ ಎಂದಿದ್ದರು. ಹೀಗಾಗಿ 10 ಕೆಜಿ ಅಕ್ಕಿ ಕೊಡಬೇಕು ಎಂದರು.

ಷರತ್ತು ರಹಿತವಾಗಿ 200 ಯೂನಿಟ್ ವಿದ್ಯುತ್ ಉಚಿತವಾಗಿ ಕೊಡಬೇಕು. 200 ಯೂನಿಟ್ ಮೀರಿದರೆ ಚಾರ್ಜ್ ಹಾಕಲಿ. ಆದರೆ 10 ತಿಂಗಳ ಸರಾಸರಿ ಯೂನಿಟ್ ಬೇಡ. ಹೇಳಿದಂತೆ 200 ಯೂನಿಟ್ ಫ್ರೀ ಕೊಡಬೇಕು ಎಂದು ಆಗ್ರಹಿಸಿದರು.

ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ಮಹಿಳೆಯರಿಗೆ 2 ಸಾವಿರ ರೂ. ಕೊಡ್ತೀವಿ ಎಂದಿದ್ದರು. ಈಗ ಮನೆ ಯಜಮಾನಿಗೆ 2 ಸಾವಿರ ರೂ. ಎಂದು ಹೇಳಿ ಜಗಳ ತಂದು ಹಾಕಿದ್ದಾರೆ. ಎಲ್ಲ ಮಹಿಳೆರಿಗೂ 2 ಸಾವಿರ ರೂ. ಕೊಡಬೇಕು. ಎಲ್ಲವನ್ನೂ ಹೇಳಿದಂತೆ ಕೊಡಬೇಕು. ಇಲ್ಲದೇ ಹೋದರೆ ಬಿಜೆಪಿ ಪ್ರತಿಭಟನೆ ನಡೆಸಲಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಗ್ಯಾರಂಟಿ ಭಾರದಲ್ಲಿ ಮುಳುಗಿ ಹೋಗಿದೆ. ಕಾಂಗ್ರೆಸ್ ಮೊದಲು ಈಜಲು ಶುರು ಮಾಡಲಿ. ‘ಮೋಸ ನಿಲ್ಲಿಸಿ ಗ್ಯಾರಂಟಿ ಜಾರಿಗೊಳಿಸಿ’ ಘೋಷವಾಕ್ಯದೊಂದಿಗೆ ಹೋರಾಟ ಮಾಡುತ್ತೇವೆ. ರೈತ ನಾಯಕ ಯಡಿಯೂರಪ್ಪ ನೇತೃತ್ವದಲ್ಲಿ ಸದನದ ಹೊರಗೆ ಹೋರಾಟ ಮಾಡುತ್ತೇವೆ ಎಂದು ಹೇಳಿದರು.

Join Whatsapp