ಮಂಡ್ಯ: ಹನುಮ ಧ್ವಜ ತೆರವುಗೊಳಿಸಿದ ಹಿನ್ನೆಲೆ ಕೆರಗೋಡು ಗ್ರಾಮಕ್ಕೆ ಆಗಮಿಸಿದ್ದ ಬಿಜೆಪಿ ನಾಯಕರಾದ ಆರ್ ಅಶೋಕ್ ಮತ್ತು ಅಶ್ವಥ್ ನಾರಾಯಣ್ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸ್ಥಳದಿಂದ ಕರೆದುಕೊಂಡು ಹೋಗಿದ್ದಾರೆ.
ಗ್ರಾಮದಲ್ಲಿ ಹನುಮ ಧ್ವಜ ಇಳಿಸಿದ ಪ್ರಕರಣದ ಸಂಬಂಧ ಫೆಬ್ರವರಿ 9ಕ್ಕೆ ಮಂಡ್ಯ ನಗರ ಬಂದ್ ಗೆ ಭಜರಂಗದಳ ಕರೆ ನೀಡಿದೆ. ಮತ್ತೆ ಹನುಮ ಧ್ವಜ ಹಾರಟಕ್ಕೆ ಒತ್ತಾಯಿಸಿ ಬೃಹತ್ ಹೋರಾಟಕ್ಕೆ ಭಜರಂಗದಳ, ಬಂದ್ ನಡೆಸಿ ಒತ್ತಡ ತರಲು ಮುಂದಾಗಿದೆ.
ಹನುಮನ ಧ್ವಜ ಇಳಿಸಲು ಶಾಸಕ ಗಣಿಗ ರವಿಯವರೇ ಕಾರಣ ಎಂದು ಶಾಸಕರ ಭಾವ ಚಿತ್ರಕ್ಕೆ ಬೆಂಕಿ ಹಚ್ಚಿ ಬಿಜೆಪಿ ಕಾರ್ಯಕರ್ತರು ಆಕ್ರೋಶ ಹೊರಹಾಕಿದ ಘಟನೆಯೂ ನಡೆದಿದೆ. ಈ ನಡುವೆ ಪೊಲೀಸರ ಮನವೊಲಿಕೆಗೂ ಬಗ್ಗದೇ ಧ್ವಜ ಸ್ತಂಬ ಹತ್ತಿ ಕೇಸರಿ ಬಾವುಟ ಹಾರಿಸಲು ಮಹಿಳೆಯರು, ಯುವಕರು ಯತ್ನಿಸಿದ್ದಾರೆ.