ಕೋವಿಡ್ ಮೃತರ ಚಿತಾಭಸ್ಮದಲ್ಲಿ ಮ.ಪ್ರ. ಸರ್ಕಾರ ಮಾಡಲು ಹೊರಟಿರುವುದೇನು?

Prasthutha|

ಭೋಪಾಲ್: ಕೋವಿಡ್ ಎರಡನೇ ಅಲೆಯಿಂದ ಮೃತಪಟ್ಟವರ ನೆನಪಿಗಾಗಿ ಉದ್ಯಾನವನವನ್ನು ನಿರ್ಮಿಸಲು ಮಧ್ಯಪ್ರದೆಶದ ಭೋಪಾಲ್ ನ ಸ್ಮಶಾನವೊಂದು ನಿರ್ಧರಿಸಿದೆ. ಭದ್‌ಬದ ವಿಶ್ರಮ್ ಘಾಟ್ ಭೋಪಾಲ್‌ನ ಅತಿದೊಡ್ಡ ಸ್ಮಶಾನಗಳಲ್ಲಿ ಒಂದಾಗಿದೆ. ಇಲ್ಲಿ ಅಂತ್ಯಕ್ರಿಯೆ ನಡೆಸಿದ ಕೋವಿಡ್ ನಿಂದ ಮೃತಪಟ್ಟವರ ಚಿತಾಭಸ್ಮವನ್ನು ಬಳಸಿ ಉದ್ಯಾನವನವನ್ನು ನಿರ್ಮಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

- Advertisement -

ಸುಮಾರು 21 ಟ್ರಕ್ ಲೋಡ್ ಚಿತಾಭಸ್ಮವು ವಿಶ್ರಮ್ ಘಾಟ್ ನಲ್ಲಿ ವಿಲೇವಾರಿ ಮಾಡದೆ ಹಾಗೆಯೇ ಉಳಿದಿದೆ. ಈಗಿನ ಪರಿಸ್ಥಿತಿಯಲ್ಲಿ ಅವುಗಳನ್ನು ನದಿಗಳಲ್ಲಿ ಬಿಡುವುದು ಸೂಕ್ತವಲ್ಲ. ಆದ್ದರಿಂದ, ಚಿತಾಭಸ್ಮವನ್ನು ಬಳಸಿ ಮೃತಪಟ್ಟವರ ನೆನಪಿಗಾಗಿ ಉದ್ಯಾನವನವನ್ನು ನಿರ್ಮಿಸಲು ವಿಶ್ರಮ್ ಘಾಟ್ ನಿರ್ವಹಣಾ ಸಮಿತಿ ನಿರ್ಧರಿಸಿದೆ.

ಈ ಉದ್ಯಾನವನವು ಸುಮಾರು 12,000 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ಉದ್ಯಾನವನದಲ್ಲಿ 3500-4000 ಸಸ್ಯಗಳನ್ನು ನೆಡುವ ಗುರಿ ಹೊಂದಿದ್ದು, ಸಸ್ಯಗಳು ವೇಗವಾಗಿ ಬೆಳೆಯಲು ಮಣ್ಣಿನಲ್ಲಿ ಬೂದಿ, ಸಗಣಿ ಮತ್ತು ಮರದ ಹುಡಿ ಬೆರೆಸಲಾಗುವುದು ಎಂದು ಸಮಿತಿಯ ಸದಸ್ಯರೊಬ್ಬರು ತಿಳಿಸಿದ್ದಾರೆ.

Join Whatsapp