ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಸಿರಾಜ್ ಇದೀಗ ಸುದ್ದಿಯಾಗಿದ್ದಾರೆ. ಖ್ಯಾತ ಗಾಯಕಿ ಆಶಾ ಭೋಸ್ಲೆ ಅವರ ಮೊಮ್ಮಗಳು ಜನೈ ಭೋಸ್ಲೆ ಅವರೊಂದಿಗಿರುವ ಫೋಟೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಹಲವು ವದಂತಿಗಳು ಹುಟ್ಟಿಕೊಂಡಿವೆ.
ಜನೈ ಅವರು ತಮ್ಮ 23ನೇ ಹುಟ್ಟುಹಬ್ಬದಂದು Instagram ನಲ್ಲಿ ಸರಣಿ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಅಚ್ಚರಿಯ ವಿಚಾರವೆಂದರೆ, ಅವರು ಹಂಚಿಕೊಂಡಿರುವ ಫೋಟೊಗಳಲ್ಲಿ ಸಿರಾಜ್ ಜೊತೆಗಿರುವ ಫೋಟೊ ಇದೀಗ ವೈರಲ್ ಆಗಿದೆ.
ಚಿತ್ರದಲ್ಲಿ ಇಬ್ಬರು ನಗುತ್ತಾ, ಆತ್ಮೀಯರಾಗಿರುವುದು ಕಂಡುಬಂದಿದ್ದು, ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವದಂತಿಗಳು ಹರಿದಾಡಿದ್ದವು. ಕೂಡಲೇ ಎಚ್ಚೆತ್ತುಕೊಂಡಿರುವ ಸಿರಾಜ್ ಮತ್ತು ಜನೈ ಸ್ಪಷ್ಟನೆ ನೀಡಿದ್ದಾರೆ. ಸಿರಾಜ್ ಅವರು ಆಕೆ ನನ್ನ ತಂಗಿ ಎಂದು ಕರೆದಿದ್ದರೆ, ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಜನೈ ಅವರು ‘ನನ್ನ ಪ್ರೀತಿಯ ಸಹೋದರ’ ಎಂದು ಬರೆದುಕೊಂಡಿದ್ದಾರೆ.