ಸಂಸದ ಅಸಾದುದ್ದೀನ್ ಉವೈಸಿ ಉತ್ತರ ಪ್ರದೇಶದ ಬಾರಾಬಂಕಿ ಭೇಟಿಗೆ ಅನುಮತಿ ನಿರಾಕರಿಸಿದ ಜಿಲ್ಲಾಡಳಿತ

Prasthutha|

ಬಾರಾಬಂಕಿ: ಭದ್ರತಾ ಕಾರಣಗಳಿಗಾಗಿ ಎ.ಐ.ಎಂ.ಐ.ಎಂ ಮುಖ್ಯಸ್ಥ ಅಸಾದುದ್ದೀನ್ ಉವೈಸಿ ಅವರ ಬರಾಬಂಕಿ ಭೇಟಿಗೆ ಜಿಲ್ಲಾಡಳಿತ ಅನುಮತಿ ನಿರಾಕರಿಸಿದೆ.

- Advertisement -

ಪ್ರಸಕ್ತ ಉವೈಸಿ ಯುಪಿ ಪ್ರವಾಸದಲ್ಲಿದ್ದು, ಮುಂದಿನ ವರ್ಷ ನಡೆಯುವ ರಾಜ್ಯ ವಿಧಾನಸಭೆ ಚುನಾವಣೆಗೆ ಮುನ್ನ ತಮ್ಮ ಪಕ್ಷದ ಪರ ಪ್ರಚಾರ ನಡೆಸುತ್ತಿದ್ದಾರೆ. ಈ ನಡುವೆ ಅವರು ಮಂಗಳವಾರ ತಮ್ಮ ಪ್ರಚಾರವನ್ನು ಆಯೋದ್ಯೆಯಿಂದ ಆರಂಭಿಸಿದ್ದರು ಮತ್ತು ಗುರುವಾರ ಬಾರಬಂಕಿಯಲ್ಲಿ ಸಭೆಯನ್ನೆದ್ದೇಶಿಸಿ ಮಾತನಾಡುವ ನಿರೀಕ್ಷೆಯಿತ್ತು.

ಎ.ಐ.ಎಂ.ಐ.ಎಂ. ನ ಸಜ್ಜದ್ ಹುಸೇನ್ ಅವರು ಕತ್ರಾ ಇಮಾಂಬರಾ ಎಸ್.ಡಿ.ಎಮ್ ಸದರ್ ನವಾಬ್ ಗಂಜ್ ನಲ್ಲಿ ಸಾರ್ವಜನಿಕ ಸಭೆಗೆ ಅನುಮತಿ ಕೋರಿದ್ದರು. ಭದ್ರತಾ ಕಾರಣಗಳಿಂದಾಗಿ ಈ ಸಭೆಗೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಪೊಲೀಸ್ ಅಧಿಕಾರಿ ಪಂಕಜ್ ಸಿಂಗ್ ತಿಳಿಸಿದ್ದಾರೆ.

- Advertisement -

ಈ ಮಧ್ಯೆ ಎ.ಐ.ಎಂ.ಐ.ಎಂ ಜಿಲ್ಲಾಧ್ಯಕ್ಷ ಚೌಧರಿ ಫೈಝುರ್ ರಹ್ಮಾನ್ ಎಂಬವರ ಕತ್ರಾ ಬರದಾರಿ ಎಂಬಲ್ಲಿನ ನಿವಾಸದಲ್ಲಿ ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ರ ವರೆಗೆ ಕಾರ್ಯಕ್ರಮ ನಡೆಸಲು ಜಿಲ್ಲಾಡಳಿತ ಅನುಮತಿ ನೀಡಿದೆ. ಮಾತ್ರವಲ್ಲದೆ ಕೊರೋನ ಮಾರ್ಗಸೂಚಿಯನ್ನು ಪಾಲಿಸಿ ಕೇವಲ 50 ಜನರಿಗೆ ಮಾತ್ರ ಈ ಸಭೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ.

ಯುಪಿಯ ಸುಲ್ತಾನಪುರದಲ್ಲಿ ನಡೆದ ಪಕ್ಷದ ಸಭೆಯಲ್ಲಿ ಮಾತನಾಡಿದ ಉವೈಸಿ, ಸಮಾಜವಾದಿ ಮತ್ತು ಬಹುಜನ ಸಮಾಜವಾದಿ ಪಕ್ಷಗಳ ಮೂರ್ಖತನದಿಂದಾಗಿ ನರೇಂದ್ರ ಮೋದಿಯವರು ಎರಡು ಬಾರಿ ಈ ದೇಶದ ಪ್ರಧಾನಿಯಾದರು ಎಂದು ಗುಡುಗಿದರು.

ಅಖಿಲೇಶ್ ಮತ್ತು ಮಾಯಾವತಿ ಯವರು ಇತ್ತೀಚೆಗೆ ಸಂಸದ ಒವೈಸಿ ಅವರನ್ನು “ವೋಟ್ ಸ್ಪಾಯ್ಲರ್” ಎಂದು ಕರೆದ ಹಿನ್ನೆಲೆಯಲ್ಲಿ ಎಸ್.ಪಿ ಮತು ಬಿಎಸ್ಪಿ ವಿರುದ್ಧ ಖಾರವಾಗಿ ಪ್ರತಿಪ್ರಿಯಿಸಿದ್ದಾರೆ.

Join Whatsapp