ʼಬೀದಿ ನಾಯಿಗೆ ಇರುವ ಗೌರವ ಮುಸ್ಲಿಮರಿಗಿಲ್ಲʼ – ಗುಜರಾತ್ನಲ್ಲಿ ಮುಸ್ಲಿಮರಿಗೆ ಥಳಿಸಿದ ಘಟನೆಯ ನೆನೆದು ಮರುಕ ವ್ಯಕ್ತಪಡಿಸಿದ ಅಸಾದುದ್ದೀನ್ ಓವೈಸಿ

Prasthutha|

ಹೈದರಾಬದ್ : ಗುಜರಾತ್ನಲ್ಲಿ ನವರಾತ್ರಿ ಗರ್ಭಾ ಕಾರ್ಯಕ್ರಮಕ್ಕೆ ಕಲ್ಲು ತೂರಾಟ ನಡೆಸಿದ ಆರೋಪದ ಮೇಲೆ ಕೆಲವು ಮುಸ್ಲಿಂ ವ್ಯಕ್ತಿಗಳನ್ನು ಕಂಬಕ್ಕೆ ಕಟ್ಟಿ ಪೊಲೀಸರು ಥಳಿಸಿದ ಘಟನೆಯ ವಿರುದ್ಧ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕಿಡಿ ಕಾರಿದ್ದಾರೆ.

- Advertisement -

“ದಾರಿ ತಪ್ಪಿದ ಬೀದಿ ನಾಯಿಗೆ ಭಾರತದ ನೆಲದಲ್ಲಿ ಗೌರವವಿದೆ. ಆದರೆ ಮುಸ್ಲಿಮರಿಗಿಲ್ಲ” ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ, ಆ ಘಟನೆಯ ಕುರಿತು ಮರುಕ ವ್ಯಕ್ತಪಡಿಸಿದ್ದಾರೆ. ಅವರು ಹೇಳಿದ ವಿಡಿಯೋವನ್ನು ಎ ಎನ್ ಐ ಸುದ್ದಿ ಸಂಸ್ಥೆಯು ಟ್ವಿಟರ್ ನಲ್ಲಿ ವಿಡಿಯೋ ಹಂಚಿದೆ.

‘ಬಿಜೆಪಿ ಗದ್ದುಗೆಯಲ್ಲಿರುವ ಈ ದೇಶದಲ್ಲಿ ಮುಸ್ಲಿಮರು ತೆರೆದ ಜೈಲಿನಲ್ಲಿ ವಾಸಿಸುತ್ತಿರುವಂತೆ ಭಾಸವಾಗುತ್ತಿದೆʼ ಎಂದು ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.

- Advertisement -



Join Whatsapp