ಮಂಗಳೂರು: 75 ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ಗಣರಾಜ್ಯ ರಕ್ಷಿಸಿ ಎಂಬ ರಾಷ್ಟ್ರೀಯ ಅಭಿಯಾನದ ಅಂಗವಾಗಿ ಮಂಗಳೂರು ಗ್ರಾಮಾಂತರ ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂ ವತಿಯಿಂದ ವಿವಿಧ ಆಸ್ಪತ್ರೆ ಮತ್ತು ರಕ್ತನಿಧಿಗಳ ಸಹಯೋಗದೊಂದಿಗೆ 10 ಕಡೆಗಳಲ್ಲಿ ಏಕ ಕಾಲಕ್ಕೆ “ಸಾರ್ವಜನಿಕ ರಕ್ತದಾನ ಶಿಬಿರ’ವನ್ನು ಆಗಸ್ಟ್ 15ರಂದು ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 1:30 ರ ತನಕ ಶಿಬಿರ ನಡೆಯಲಿದೆ. ರಕ್ತದಾನ ಶಿಬಿರಗಳು ಬಜಪೆ, ಕಾವೂರು, ಜೋಕಟ್ಟೆ, ಅಂಗರಗುಂಡಿ, ಗುರುಪುರ ಕೈಕಂಬ, ಅಡ್ಡೂರು, ಮೂಡಬಿದಿರೆ, ಹಳೆಯಂಗಡಿ, ಮುಲ್ಕಿ, ಗುತ್ತಗಾಡು ಮುಂತಾದ ಪ್ರದೇಶಗಳಲ್ಲಿ ಏಕಕಾಲದಲ್ಲಿ ನಡೆಯಲಿವೆ.
ಎ. ಜೆ ಆಸ್ಪತ್ರೆ ಮಂಗಳೂರು, ಕೆ.ಎಂ.ಸಿ ಆಸ್ಪತ್ರೆ ಜ್ಯೋತಿ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮಂಗಳೂರು, ಫಾದರ್ ಮುಲ್ಲರ್ ಆಸ್ಪತ್ರೆ ಕಂಕನಾಡಿ, ಶ್ರೀನಿವಾಸ್ ಆಸ್ಪತ್ರೆ ಮುಕ್ಕ, ವೆನ್ಲಾಕ್ ಆಸ್ಪತ್ರೆ ಮಂಗಳೂರು, ಯೆನಪೋಯ ಆಸ್ಪತ್ರೆ ದೇರಳಕಟ್ಟೆ, ಆಳ್ವಾಸ್ ಆಸ್ಪತ್ರೆ ಮೂಡಬಿದ್ರೆ ಇವುಗಳ ಸಹಯೋಗದಲ್ಲಿ ಈ ಶಿಬಿರಗಳನ್ನು ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.