ಚುನಾವಣೆ ಹತ್ತಿರ ಬರುತ್ತಿರುವಾಗ ಕೋಮುಕ್ರಿಮಿ ಮತ್ತೆ ಬೊಗಳಲು ಆರಂಭಿಸಿದೆ: ಅಶ್ರಫ್ ಮಾಚಾರ್

Prasthutha|

ಮಂಗಳೂರು: ಪ್ರವೀಣ್ ಹತ್ಯೆಗೆ ಪ್ರತೀಕಾರವಾಗಿ ಸುರತ್ಕಲ್’ನ ಫಾಝಿಲ್’ನನ್ನು ಕೊಲೆ ಮಾಡಲಾಯಿತು. ಇದು ಹಿಂದೂ ಯುವಕರ ಸಾಮರ್ಥ್ಯ ಎಂಬ ಬಜರಂಗದಳ ಮುಖಂಡ ಶರಣ್ ಪಂಪ್‌ವೆಲ್ ಪ್ರಚೋದನಕಾರಿ ಹೇಳಿಕೆಯನ್ನು ಎಸ್’ಡಿಪಿಐ ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್ ತೀವ್ರವಾಗಿ ಖಂಡಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಚುನಾವಣೆ ಹತ್ತಿರ ಬರುತ್ತಿರುವಾಗ ಈ ಕೋಮುಕ್ರಿಮಿ ಮತ್ತೆ ಬೊಗಳಲು ಆರಂಭಿಸಿದೆ. ಮಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿಯವರೇ ಇವನ ಕಿವಿಯಲ್ಲಿ ಪಿಸುಗುಟ್ಟಿ ಧೈರ್ಯ ತುಂಬಿ ಹೋಗಿರುವಾಗ ಇವನ ಮೇಲೆ ಯಾವುದೇ ಕಾನೂನು ಕ್ರಮ ಜರಗುವ ನಿರೀಕ್ಷೆಯಾದರೂ ಎಲ್ಲಿಂದ? ಅಲ್ಲವೇ @DgpKarnataka ರವರೇ ಎಂದು ಎಸ್’ಡಿಪಿಐ ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್ ಪ್ರಶ್ನಿಸಿದ್ದಾರೆ.

- Advertisement -