ಆರ್ಯನ್ ಖಾನ್ ಕೊನೆಗೂ ಜೈಲಿನಿಂದ ಬಿಡುಗಡೆ

Prasthutha|

ಮುಂಬೈ: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿ ಆರ್ಥರ್ ಜೈಲು ಸೇರಿರುವ ಬಾಲಿವುಡ್ ನಟ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಇಂದು ಮಧ್ಯಾಹ್ನ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಆರ್ಯನ್ ಖಾನ್ ಅವರಿಗೆ ಅ. 28ರಂದು ಬಾಂಬೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಬಿಡುಗಡೆಗೆ ಸಂಬಂಧಿಸಿದ ಪ್ರಕ್ರಿಯೆಗಳ ಕಾರಣದಿಂದಾಗಿ ಜಾಮೀನಿನ ಹೊರತಾಗಿಯೂ ಆರ್ಯನ್ ಖಾನ್ ಶನಿವಾರದ ವರೆಗೆ ಜೈಲಿನಲ್ಲಿ ಇರಬೇಕಾಗಿ ಬಂದಿತ್ತು. 28 ದಿನಗಳ ಬಳಿಕ ಆರ್ಯನ್ ಇಂದು ಬಿಡುಗಡೆಯಾಗಿದ್ದಾರೆ.

- Advertisement -


ನೂರಾರು ಬೆಂಬಲಿಗರು, ಅಭಿಮಾನಿಗಳು ಈ ವೇಳೆ ಆರ್ಥರ್ ಜೈಲಿನ ಸುತ್ತ ನೆರೆದಿದ್ದರು.
ಮುಂಬೈ : ಮುಂಬೈ ಕರಾವಳಿ ಸಮೀಪ ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಸೇವಿಸಿದ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಬಾಲಿವುಡ್ ಸೂಪರ್ ಸ್ಟಾರ್ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್’ ಗೆ ಗುರುವಾರ ಬಾಂಬೆ ಹೈಕೋರ್ಟ್ ಜಾಮೀನು ನೀಡಿತ್ತು. ಆದರೆ ಜಾಮೀನು ದೊರೆತರೂ ಆರ್ಯನ್ ಖಾನ್ ನಿರಾಳರಾಗುವಂತಿಲ್ಲ. ಜಾಮೀನು ನೀಡುವುದರ ಜೊತೆ ಬಾಂಬೆ ಹೈಕೋರ್ಟ್ 14 ಷರತ್ತುಗಳನ್ನು ವಿಧಿಸಿದೆ.


ಪೊಲೀಸರಿಗೆ ಮಾಹಿತಿ ನೀಡದೆ ಆರ್ಯನ್ ಖಾನ್ ಮುಂಬೈ ಬಿಟ್ಟುಹೋಗುವಂತಿಲ್ಲ. 1 ಲಕ್ಷ ರುಪಾಯಿ ವೈಯಕ್ತಿಕ ಬಾಂಡ್ ಶ್ಯೂರಿಟಿ ನೀಡಬೇಕು. ಪಾಸ್ ’ಪೋರ್ಟ್’ ಅನ್ನು ಮುಂಬೈ ಕೋರ್ಟ್’ಗೆ ಒಪ್ಪಿಸಬೇಕು. ಪ್ರತೀ ಶುಕ್ರವಾರ 11 ಗಂಟೆಗೆ NCB ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಬೇಕು. ಇದರ ನಡುವೆ NCB ಅಧಿಕಾರಿಗಳು ವಿಚಾರಣೆಗೆ ಹಾಜರಾಗಲು ತಿಳಿಸಿದರೆ ತಪ್ಪದೆ ಹಾಜರಾಗಬೇಕು. ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿರುವ ಅರ್ಬಾಜ್ ಮರ್ಚೆಂಟ್ ಹಾಗೂ ಮುನ್ಮುನ್ ಧಮೇಚಾರನ್ನು ಭೇಟಿಯಾಗುವಂತಿಲ್ಲ. ಮಾಧ್ಯಮಗಳ ಎದುರು ಪ್ರಕರಣಕ್ಕೆ ಸಂಬಂಧಪಟ್ಟಂತೆ ಯಾವುದೇ ಹೇಳಿಕೆ ನೀಡುವಂತಿಲ್ಲ ಎಂಬ ಷರತ್ತನ್ನು ಆರ್ಯನ್ ಗೆ ನ್ಯಾಯಾಲಯ ನೀಡಿದೆ..

Join Whatsapp