ಆರ್ಯನ್ ಖಾನ್ ಪ್ರಕರಣದ ತನಿಖೆಯಿಂದ ಸಮೀರ್ ವಾಂಖೆಡೆಗೆ ಕೊಕ್ ನೀಡಿದ ಎನ್.ಸಿ.ಬಿ

Prasthutha|

ಮುಂಬೈ: ಇತ್ತೀಚೆಗೆ ಡ್ರಗ್ಸ್ ಪ್ರಕರಣದಲ್ಲಿ ಬಂಧಿತ ಶಾರುಕ್ ಪುತ್ರ ಆರ್ಯನ್ ಖಾನ್ ಅವರ ತನಿಖಾಧಿಕಾರಿಯಾಗಿದ್ದ ಸಮೀರ್ ವಾಂಖೆಡೆ ಅವರನ್ನು ಎನ್.ಸಿ.ಬಿ, ತನಿಖಾ ತಂಡದಿಂದ ಕೈಬಿಟ್ಟಿದೆ. ಸಮೀರ್ ವಿರುದ್ಧ 8 ಕೋಟಿ ಲಂಚ ಮತ್ತು ಸುಲಿಗೆ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

- Advertisement -

ಸಮೀರ್ ಸ್ಥಾನಕ್ಕೆ ಹಿರಿಯ ಪೊಲೀಸ್ ಅಧಿಕಾರಿ ಸಂಜಯ್ ಸಿಂಗ್ ಅವರನ್ನು ನೇಮಿಸಲಾಗಿದೆ. ಆರ್ಯನ್ ಪ್ರಕರಣವನ್ನು ಸಂಜಯ್ ಸಿಂಗ್ ನೇತೃತ್ವದ ಎಸ್.ಐ.ಟಿ ತಂಡ ವಹಿಸಲಿದೆ.

ಮಹಾರಾಷ್ಟ್ರದ ಸಚಿವ ನವಾಬ್ ಮಲಿಕ್, ಸಮೀರ್ ವಾಂಖೆಡೆ ಅವರನ್ನು ಕಾರ್ಯಕ್ಷಮತೆಯ ಬಗ್ಗೆ ಪ್ರಶ್ನಿಸಿದ ಬಳಿಕ ವಿವಾದದ ಕೇಂದ್ರಬಿಂದುವಾಗಿದ್ದರು. ಮಾತ್ರವಲ್ಲ ಸಮೀರ್ ಅವರನ್ನು ತನಿಖೆಗೆ ಒಳಪಡಿಸಲಾಗಿತ್ತು.

- Advertisement -

ಕಳೆದ ವಾರ ಸಾಕಷ್ಟು ಟೀಕೆ, ಕೋಲಾಹಲದ ನಡುವೆ ಡ್ರಗ್ಸ್ ವಿರೋಧಿ ಏಜೆನ್ಸಿಯ ಉಪ ಮಹಾನಿರ್ದೇಶಕ ಜ್ಞಾನೇಶ್ವರ್ ಸಿಂಗ್ ನೇತೃತ್ವದಲ್ಲಿ ಆಂತರಿಕ ತನಿಖೆಯನ್ನು ಪ್ರಾರಂಭಿಸಿತ್ತು.

Join Whatsapp