ಮುಂಬೈ: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈಯಲ್ಲಿ ಬಂಧಿತರಾದ ಶಾರುಕ್ ಖಾನ್ ಪುತ್ರ ಆರ್ಯನ್ ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದ್ದು, ಅಕ್ಟೋಬರ್ 7 ರ ವರೆಗೆ ಡ್ರಗ್ಸ್ ವಿರೋಧಿ ಏಜೆನ್ಸಿ (ಎನ್.ಸಿ.ಬಿ) ವಶಕ್ಕೆ ಒಪ್ಪಿಸಿ ಆದೇಶ ನೀಡಿದೆ.
ಘಟನೆಯಲ್ಲಿ ಅಂತಾರಾಷ್ಟ್ರೀಯ ಸಂಬಂಧದ ತನಿಖೆ ನಡೆಸುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿವೆ.
ಭಾನುವಾರ ಎನ್.ಸಿ.ಬಿ ನಡೆಸಿದ ದಾಳಿಯಲ್ಲಿ ಎಂ.ಡಿ.ಎಂ.ಎ, ಕೊಕೇನ್ ಒಳಗೊಂಡಂತೆ ಅಪಾರ ಪ್ರಮಾಣದ ಡ್ರಗ್ಸ್ ಗಳೊಂದಿಗೆ ಶಾರುಕ್ ಪುತ್ರ ಆರ್ಯನ್ ಜೊತೆ ಅರ್ಬಾಝ್ ಮತ್ತು ಮುನ್ಮುನ್ ಧಮೇಚಾ ಎಂಬವರನ್ನು ಬಂಧಿಸಿತ್ತು. ಪ್ರಸಕ್ತ ಈ ಎಲ್ಲಾ ಆರೋಪಿಗಳನ್ನು ಎನ್.ಸಿ.ಬಿ ವಶಕ್ಕೆ ಒಪ್ಪಿಸಲಾಗಿದೆ