ಆಟೋ ಚಾಲಕನ ಮನೆಯಲ್ಲಿ ಆಹಾರ ಸೇವಿಸಿದ ಅರವಿಂದ್ ಕೇಜ್ರಿವಾಲ್

Prasthutha|

ಗುಜರಾತ್: ದೆಹಲಿ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರನ್ನು ಸೋಮವಾರ ಗುಜರಾತ್‌ನಲ್ಲಿ ಪಕ್ಷದ ಕಾರ್ಯಕ್ರಮದ ವೇಳೆ ಆಟೋ ಚಾಲಕನೊಬ್ಬ ತನ್ನ ಮನೆಗೆ ಊಟಕ್ಕೆ ಕರೆದಿದ್ದು, ಮನವಿಗೆ ಸ್ಪಂದಿಸಿ ಆತನ ಆಟೋದಲ್ಲೇ ತೆರಳಿದ್ದಾರೆ.

- Advertisement -


ಅರವಿಂದ್ ಕೇಜ್ರಿವಾಲ್ ಅವರು ದೆಹಲಿಯಲ್ಲಿ ತಮ್ಮ ಪಕ್ಷಕ್ಕೆ ಸಹಾಯ ಮಾಡಿದ ರೀತಿಯಲ್ಲಿಯೇ ತಮ್ಮ ಪ್ರಯಾಣಿಕರಲ್ಲಿ ಪಕ್ಷದ ಬಗ್ಗೆ ಪ್ರಚಾರ ಮಾಡುವ ಮೂಲಕ ಗುಜರಾತ್‌ನಲ್ಲಿ ಎಎಪಿ ಗೆಲ್ಲಲು ಸಹಾಯ ಮಾಡುವಂತೆ ಆಟೋರಿಕ್ಷಾ ಚಾಲಕರ ಸಮಾವೇಶ ಆಯೋಜಿಸಿದ್ದರು.


ಕೇಜ್ರಿವಾಲ್ ಅವರ ಭಾಷಣದ ನಂತರ, ಒಬ್ಬ ಆಟೋ ಡ್ರೈವರ್ ತನ್ನ ಮನೆಯಲ್ಲಿ ಊಟ ಮಾಡುವಂತೆ ವಿನಂತಿ ಮಾಡಿದ್ದ. ಆಹ್ವಾನವನ್ನು ಸ್ವೀಕರಿಸಿದ ಕೇಜ್ರಿವಾಲ್ ಆತನ ಆಟೋದಲ್ಲೇ ತೆರಳಿದ್ದಾರೆ.
ಪಕ್ಷದ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ಹಂಚಿಕೊಂಡ ವೀಡಿಯೊದಲ್ಲಿ, ಆಟೋ ಚಾಲಕ ಅರವಿಂದ್ ಕೇಜ್ರಿವಾಲ್ ಅವರನ್ನು ಊಟಕ್ಕೆ ಆಹ್ವಾನಿಸುತ್ತಿರುವುದನ್ನು ಪ್ರಕಟಿಸಲಾಗಿದೆ.

- Advertisement -


ಆಟೋರಿಕ್ಷಾದಲ್ಲೇ ಚಾಲಕನ ಮನೆಗೆ ತೆರಳುವಾಗ ತಡೆದ ಗುಜರಾತ್ ಪೊಲೀಸರು ಭದ್ರತೆ ನೆಪವೊಡ್ಡಿ ಆಟೋದಲ್ಲಿ ಸಂಚರಿಸಬೇಡಿ ಅಂದಿದ್ದಾರೆ. ಆದರೆ ಕೇಜ್ರಿವಾಲ್ ಮತ್ತು ಪೊಲೀಸರ ನಡುವಿನ ವಾಗ್ವಾದದ ಬಳಿಕ ಕೊನೆಗೆ ಆಟೋದಲ್ಲೇ ಕೇಜ್ರಿವಾಲ್ ಚಾಲಕನ ಮನೆಗೆ ತೆರಳಿ ಊಟ ಮಾಡಿದ್ದಾರೆ.


ಈ ವರ್ಷದ ಕೊನೆಯಲ್ಲಿ ಗುಜರಾತ್‌ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಅರವಿಂದ್ ಕೇಜ್ರಿವಾಲ್ ಪದೇ ಪದೇ ಗುಜರಾತ್‌ಗೆ ಭೇಟಿ ನೀಡುತ್ತಿದ್ದು, ಗುಜರಾತ್‌ ಮೇಲೆ ಕಣ್ಣಿಟ್ಟಿದ್ದಾರೆ.
ಆಮ್ ಆಧ್ಮಿ ಪಕ್ಷ ಆಧಿಕಾರಕ್ಕೆ ಬಂದರೆ ಗುಜರಾತಿನಲ್ಲಿ ಆಟೋ ಚಾಲಕರಿಗೆ ಮನೆ ಬಾಗಿಲಿಗೆ ಆರ್.ಟಿ.ಓ ಸೇವೆ, 300 ಯುನಿಟ್ ವರೆಗೆ ಉಚಿತ ವಿದ್ಯುತ್, ಗುಣಮಟ್ಟದ ಶಿಕ್ಷಣ ಹಾಗೂ ಆರೋಗ್ಯ ಸೇವೆ ಕೊಡುವ ಭರವಸೆಯನ್ನು ಕೇಜ್ರಿವಾಲ್ ಈಗಾಗಲೇ ನೀಡಿದ್ದಾರೆ.

Join Whatsapp