ಪಬ್ಲಿಕ್ ಟಿವಿಯಲ್ಲಿ ಸಿದ್ದು ,ಡಿಕೆಶಿಗೆ ಗುಂಡಿಕ್ಕಿ ಕೊಲ್ಲುವ ಹೇಳಿಕೆ: ದೂರು ದಾಖಲಾದ ಬೆನ್ನಲ್ಲೇ ಲೈವ್ ಬಂದು ಸ್ಪಷ್ಟನೆ ನೀಡಿದ ಅರುಣ್ ಬಡಿಗೇರ್

Prasthutha|

ಬೆಂಗಳೂರು: ಪಬ್ಲಿಕ್‌ ಟಿವಿಯಲ್ಲಿ ನಿನ್ನೆ ಸಂಜೆ 5 ಗಂಟೆಗೆ ಪ್ರಸಾರವಾದ ವಾರ್‌ ರೂಂ ಲೈವ್‌ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ದಾವಣಗೆರೆಯ ವೀರಣ್ಣ ಎಂಬುವವರು ಕರೆಮಾಡಿ ಸಿದ್ದರಾಮಯ್ಯ ಮತ್ತು ಡಿಕೆಶಿಯನ್ನು ಗುಂಡಿಕ್ಕಿ ಕೊಲ್ಲಬೇಕು ಎಂಬ ಹೇಳಿಕೆ ವಿರುದ್ಧ ಇಂದು ಕೆಲವೆಡೆ ದೂರು ದಾಖಲಾಗಿತ್ತು.

- Advertisement -

ಆ ಬೆನ್ನಲ್ಲೇ ಫೇಸ್ಬುಕ್ ಲೈವ್ ಗೆ ಬಂದ ನಿರೂಪಕ ಅರುಣ್, ದೂರವಾಣಿ ಕರೆ ಮಾಡಿದ ವ್ಯಕ್ತಿಯು ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್‌ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿರುವುದನ್ನು ಪಬ್ಲಿಕ್‌ ಟಿವಿ ಬೆಂಬಲಿಸುವುದಿಲ್ಲ ಎಂದು ಹೇಳಿದ್ದಾರೆ.

ವೀರಣ್ಣ ಮಾತನ್ನು ಬೆಂಬಲಿಸಲ್ಲ ಎಂದು ಹೇಳಿದ ಪಬ್ಲಿಕ್ ಟಿವಿ ಆ ಮಾತನ್ನೇ ವೀಡಿಯೋ ಗೆ ಕ್ಯಾಪ್ಶನ್ ಆಗಿ ಬಳಸಿತ್ತು. ಇದೀಗ ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರಕರಣದಿಂದ ನುಣುಚಿಕೊಳ್ಳುವ ಪ್ರಯತ್ನ ನಡೆಸುತ್ತಿದೆ ಎಂಬುವುದು ಸ್ಪಷ್ಟವಾಗುತ್ತಿದೆ

Join Whatsapp