ರಂಗಭೂಮಿ ಕಲಾವಿದೆ ಕಮಲಾದೇವಿ ಮೇಲೆ‌ ಆ್ಯಸಿಡ್ ದಾಳಿ; ಆರೋಪಿಗಳು ಸೆರೆ

Prasthutha|

ಬೆಂಗಳೂರು: ಖ್ಯಾತ ರಂಗಭೂಮಿ ಕಲಾವಿದೆ ಕಮಲಾದೇವಿ (51)ಅವರ ಮೇಲೆ ಆ್ಯಸಿಡ್ ದಾಳಿ ನಡೆದಿದ್ದು, ಮುಖ ಹಾಗೂ ಬೆನ್ನಿಗೆ ಸುಟ್ಟ ಗಾಯಗಳಾಗಿದ್ದರಿಂದ ಕೆ.ಸಿ. ಜನರಲ್‌ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಇದೀಗ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -

‘ಬಿಎಂಟಿಸಿ ನಿರ್ವಾಹಕರಾಗಿದ್ದ ಕಮಲಾ ದೇವಿ, ಅನಾರೋಗ್ಯದಿಂದಾಗಿ ಕೆಲಸಕ್ಕೆ ರಾಜೀನಾಮೆ ನೀಡಿದ್ದರು. ಕಲಾವಿದೆಯಾಗಿ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದ ಅವರು ಇಬ್ಬರು ಮಕ್ಕಳ ಜೊತೆ ನಂದಿನಿ ಲೇಔಟ್ ನ ಗಣೇಶ್ ಬ್ಲಾಕ್‌ನಲ್ಲಿ ವಾಸವಿದ್ದರು.

 ದೇವಿ ಹಾಗೂ ಮಕ್ಕಳು ರಾತ್ರಿ ಮನೆಯಲ್ಲಿ ಮಲಗಿದ್ದಾಗ ಸೆಕೆ ಹೆಚ್ಚಿದ್ದರಿಂದ ಗಾಳಿಯಾಡಲು ಬಾಗಿಲು ತೆರೆದಿದ್ದರು. ಮರುದಿನ ನಸುಕಿನಲ್ಲಿ ಮನೆಯೊಳಗೆ ನುಗ್ಗಿದ್ದ ಆರೋಪಿಗಳು ದೇವಿ ಮೈ ಮೇಲೆ ಆ್ಯಸಿಡ್ ಎರಚಿ ಓಡಿ ಹೋಗಿದ್ದಾರೆ.

- Advertisement -

ಕಮಲಾದೇವಿಯವರ ಹೇಳಿಕೆ ಪಡೆದು ಪ್ರಕರಣ ದಾಖಲಿಸಿಕೊಂಡ ‌ನಂದಿನಿ ಲೇಔಟ್ ಪೊಲೀಸರು ಮೂವರು ದುಷ್ಕರ್ಮಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳಾದ ರಮೇಶ್ & ಯೋಗೇಶ್

ರಮೇಶ್, ಸ್ವಾತಿ ಹಾಗೂ ಯೋಗೇಶ್ ಪ್ರಕರಣದ ಬಂಧಿತ ಆರೋಪಿಗಳಾಗಿದ್ದು, ಸ್ವಾತಿ ರಮೇಶ್ ಗೆ ಆ್ಯಸಿಡ್ ತಂದುಕೊಟ್ಟು ಕೃತ್ಯ ನಡೆಸಲು ಸಹಕರಿಸಿದ್ದರು ಎಂದು ವಿಚಾರಣೆ ವೇಳೆ ತಿಳಿದುಬಂದಿದೆ .

Join Whatsapp