ಚಾಕೊಲೇಟ್‌ನಲ್ಲಿ ಕೃತಕ ಹಲ್ಲುಗಳು ಪತ್ತೆ!

Prasthutha|

ಖಾರ್ಗೋನ್‍: ಚಾಕೋಲೇಟ್‌ಗಳಲ್ಲಿ ಹುಳಗಳು, ಕೀಟ ಪತ್ತೆಯಾಗುತ್ತಿರುವ ಜೊತೆಗೆ, ಇತ್ತೀಚೆಗೆ ವೈದ್ಯರೊಬ್ಬರು ಆನ್‍ಲೈನ್‍ನಲ್ಲಿ ಆರ್ಡರ್ ಮಾಡಿದ ಐಸ್ ಕ್ರೀಂನಲ್ಲಿ ವ್ಯಕ್ತಿಯ ಕೈಬೆರಳು ಪತ್ತೆಯಾಗಿತ್ತು. ಈ‌ ಕುರಿತು ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಮಧ್ಯಪ್ರದೇಶದ ಖಾರ್ಗೋನ್‍ನಲ್ಲಿ ನಿವೃತ್ತ ಶಾಲಾ ಪ್ರಾಂಶುಪಾಲರು ತರಿಸಿದ್ದ ಚಾಕೊಲೇಟ್‍ನಲ್ಲಿ ಹಲ್ಲುಗಳು ಪತ್ತೆಯಾಗಿವೆ.

- Advertisement -

ನಿವೃತ್ತ ಶಾಲಾ ಪ್ರಾಂಶುಪಾಲ ಮಾಯಾದೇವಿ ಗುಪ್ತಾ ಮಗುವಿನ ಹುಟ್ಟುಹಬ್ಬದ ವಿಶೇಷವಾಗಿ ಚಾಕೊಲೇಟ್ ತರಿಸಿದ್ದು, ಅದನ್ನು ಅವರು ತಿನ್ನುತ್ತಿದ್ದಾಗ ಗಟ್ಟಿ ವಸ್ತುವೊಂದು ಹಲ್ಲಿಗೆ ಸಿಕ್ಕಿದಂತಾಗಿದೆ. ಅದನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಚಾಕೊಲೇಟ್‍ನಲ್ಲಿ ನಾಲ್ಕು ಹಲ್ಲುಗಳು ಕಂಡುಬಂದಿವೆ.

ಅದು ಜನಪ್ರಿಯ ಬ್ರಾಂಡ್‍ನ ಕಾಫಿ ಫ್ಲೇವರ್ ಚಾಕೊಲೇಟ್ ಆಗಿತ್ತು. ಚಾಕೊಲೇಟ್ ತಿಂದ ನಂತರ, ಬಾಯಿಗೆ ಯಾವುದೋ ಕುರುಕಲು ಸಿಕ್ಕಿದ ಹಾಗೆ ಆಯಿತು. ನಾನು ಅದನ್ನು ಮತ್ತೆ ಜಗಿಯಲು ಪ್ರಯತ್ನಿಸಿದಾಗ, ಅದು ತುಂಬಾ ಗಟ್ಟಿಯಾಗಿತ್ತು. ನಾನು ಅದನ್ನು ಹೊರತೆಗೆದು ನೋಡಿದಾಗ, ಅದು ನಾಲ್ಕು ಕೃತಕ ಹಲ್ಲುಗಳಾಗಿದ್ದವು. ಅದನ್ನು ನೋಡಿ ನನಗೆ ಶಾಕ್‌ ಆಗಿದೆ ಎಂದು ಗುಪ್ತಾ ಹೇಳಿದ್ದಾರೆ.



Join Whatsapp