ಗೃಹ ಸಚಿವ ಪರಮೇಶ್ವರ್ ವಿರುದ್ಧ ಪೋಸ್ಟ್ : ಆರೋಪಿ ಬಂಧನ

Prasthutha|

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಗೃಹ ಸಚಿವ ಪರಮೇಶ್ವರ್ ವಿರುದ್ಧ ಪೋಸ್ಟ್ ಹಾಕಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -

ಮಂಡ್ಯ ಜಿಲ್ಲೆಯ ಮದ್ದೂರ ತಾಲೂಕಿನ ಮರಳಿಗ ಗ್ರಾಮದ ಯುವಕ ಶಿವರಾಜ್ ಗೃಹ ಸಚಿವ ಪರಮೇಶ್ವರ್ ವಿರುದ್ಧ ಪೋಸ್ಟ್ ಹಾಕಿದ್ದ. ಈ ಕುರಿತು ಮದ್ದೂರು ಕಾಂಗ್ರೆಸ್ ಮುಖಂಡರು ದೂರು ಕೆ.ಎಂ.ದೊಡ್ಡಿ ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಆದಾರದ ಮೇಲೆ ಕೆ.ಎಂ.ದೊಡ್ಡಿ ಠಾಣೆ ಪೊಲೀಸರು ಆರೋಪಿ ಶಿವರಾಜ್​ನನ್ನು ಬಂಧಿಸಿದ್ದಾರೆ.

“ಆರೋಪಿ ಶಿವರಾಜ್ ಕಳೆದ ಮೇ.30 ರಂದು ಗೃಹ ಸಚಿವ ಜಿ.ಪರಮೇಶ್ವರ್ ಒಬ್ಬ ಅಯೋಗ್ಯ, ಸ್ವಂತ ಮಗನನ್ನು ಉಳಿಸಿಕೊಳ್ಳಲಾಗಲಿಲ್ಲ. ಈತ ಅಂಬೇಡ್ಕರ್ ಅವರ ಆಶಯಗಳನ್ನು ಉಳಿಸಲಿಲ್ಲ. ಆರ್.ಎಸ್.ಎಸ್ ನವರ ಜೊತೆ ನಂಟು ಹೊಂದಿದ್ದಾರೆ. ಇವರ ಬಗ್ಗೆ ತಾಕತ್ ಇದ್ದವರು ಉತ್ತರಿಸಲಿ” ಎಂದು ಜಾಲತಾಣದಲ್ಲಿ ಅವಹೇಳನವಾಗಿ ಪೋಸ್ಟ್ ಹಾಕಿ ನಿಂದಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

- Advertisement -

ಶಿವರಾಜ್ ರನ್ನು ಮದ್ದೂರು ಪೊಲೀಸರು ಗುರುವಾರ ಬಂಧಿಸಿ, ರಾತ್ರಿ ವೇಳೆಗೆ ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.