ಜಲೀಲ್ ಹತ್ಯೆ ಪ್ರಕರಣ| ಸಂಘಪರಿವಾರದ ಸೂತ್ರಧಾರಿಗಳನ್ನು ಬಂಧಿಸಿ: ಎಸ್‌ಡಿಪಿಐ ಆಗ್ರಹ

Prasthutha|

ಮಂಗಳೂರು: ಜಲೀಲ್ ಹತ್ಯೆ ಪ್ರಕರಣದ ಸಂಘಪರಿವಾರದ ಸೂತ್ರಧಾರಿಗಳನ್ನು ಬಂಧಿಸಿ ಎಂದು ಎಸ್‌ಡಿಪಿಐ ದ.ಕ ಜಿಲ್ಲಾ  ಕಾರ್ಯದರ್ಶಿ ಅಕ್ಬರ್ ಬೆಳ್ತಂಗಡಿ ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ.

- Advertisement -

ಈ ಕುರಿತು ಪತ್ರಿಕಾ ಬಿಡುಗಡೆಗೊಳಿಸಿರುವ ಅವರು, ಸುರತ್ಕಲ್ ನ ಜಲೀಲ್ ಹತ್ಯೆ ನಡೆಸಿದ ಸಂಘಪರಿವಾರ ಸಂಘಟನೆಯ ಮೂವರು ಆರೋಪಿಗಳನ್ನು ಶೀಘ್ರ ಬಂಧಿಸಿದ ದ.ಕ ಪೊಲೀಸ್ ಇಲಾಖೆಯ ನಡೆ ಸ್ವಾಗತಾರ್ಹವಾಗಿದೆ. ಆದರೆ ಇವರು ಘಟನೆಯ ಪಾತ್ರಧಾರಿಗಳಾಗಿರುತ್ತಾರೆ, ಈ ಪ್ರಕರಣದ ಸೂತ್ರಧಾರಿಗಳನ್ನು ಶೀಘ್ರದಲ್ಲೇ ಪತ್ತೆ ಹಚ್ಚಿ ಕಠಿಣ ಕಾನೂನಿನ ಅಡಿಯಲ್ಲಿ ಕೇಸ್ ದಾಖಲಿಸಿ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಿಸಿದ್ದಾರೆ.

ಸಂಘಪರಿವಾರ ಈ ಹಿಂದಿನಿಂದಲೂ ಹತ್ಯಾ ರಾಜಕೀಯದಲ್ಲಿ ನಂಬಿಕೆ ಇರಿಸಿ ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿಸುತ್ತಿದೆ. ಈ ಬಗ್ಗೆ ಎಸ್‌ಡಿಪಿಐ ನಿಯೋಗ ಹಲವಾರು ಬಾರಿ ಜಿಲ್ಲಾಡಳಿತ, ಪೋಲಿಸ್ ಕಮಿಷನರ್ ಜಿಲ್ಲಾ ಪೊಲೀಸ್ ಅಧಿಕಾರಿಯವರನ್ನು ಭೇಟಿ ಮಾಡಿ ಮನವಿ ಮಾಡಿತ್ತು. ಆದರೆ ಜಿಲ್ಲಾಡಳಿತ ಇದನ್ನು ಗಂಭೀರವಾಗಿ ಪರಿಗಣಿಸದೇ ಸಂಘಪರಿವಾರ ಅನೈತಿಕ ಗೂಂಡಾಗಿರಿ ನಡೆಸಿ ಕೊಲೆಯತ್ನದಂತಹ ಕೃತ್ಯಗಳನ್ನು ನಡೆಸಿದಾಗಲೂ ಠಾಣೆಯಲ್ಲೇ ಜಾಮೀನು ನೀಡುವಂತಹ ಲಘು ಸೆಕ್ಷನ್ ಹಾಕಿ ಬಿಡುಗಡೆಗೊಳಿಸುವ ಕಾರಣದಿಂದಾಗಿ ಪ್ರೇರಣೆಗೊಂಡಿರುವ ಸಂಘಪರಿವಾರ ಇಂದು ಅಲ್ಪಸಂಖ್ಯಾತರನ್ನು ಹತ್ಯೆ ನಡೆಸುತ್ತಿದೆ ಎಂದು ಅಕ್ಬರ್ ಬೆಳ್ತಂಗಡಿ ಕಳವಳ ವ್ಯಕ್ತಪಡಿಸಿದ್ದಾರೆ.

- Advertisement -

ಹತ್ಯೆ ನಡೆಸಿದವರಿಗೆ ಗೊತ್ತು ಈ ಕೃತ್ಯದಿಂದ ನಾವು ಜೈಲಿಗೆ ಹೋಗಲಿದ್ದೇವೆ, ಶಿಕ್ಷೆ ಅನುಭವಿಸಲಿದ್ದೇವೆ ಎಂದು, ಆದರೂ ಇವರು ಈ ಕೃತ್ಯ ನಡೆಸುತ್ತಾರೆ ಎಂದಾದರೆ ಇದು ಇವರ ಏಕ ತೀರ್ಮಾನ ವಾಗಿರುವುದಿಲ್ಲ ಬದಲಿಗೆ ಇದರ ಹಿಂದೆ ಸಂಘಪರಿವಾರದ ಮುಖಂಡರ ತೀರ್ಮಾನ ಹಾಗೂ ಅದಕ್ಕೆ ಬೇಕಾಗಿ ವ್ಯವಸ್ಥೆ ಮಾಡುವ ಹಿಂದುತ್ವ ಶಕ್ತಿಗಳ ಕೈವಾಡ ಇರುತ್ತದೆ ಎಂದು ಅವರು ಆರೋಪಿಸಿದ್ದಾರೆ.

ಪೊಲೀಸ್ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಇದರ ಸೂತ್ರಧಾರಿಗಳು ಎಷ್ಟೇ ಪ್ರಬಲರಾಗಿದ್ದರೂ ಯಾವುದೇ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತ ರೀತಿಯಲ್ಲಿ ತನಿಖೆ ನಡೆಸಿ ನೈಜ ಆರೋಪಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಫಾಝಿಲ್ ಹಂತಕರೋರ್ವನಿಗೆ ಶೀಘ್ರದಲ್ಲೇ ಜಾಮೀನು ಸಿಕ್ಕಿದ ರೀತಿಯಲ್ಲಿ ಈ ಪ್ರಕರಣದಲ್ಲಿ ಹಾಗಾಗದಂತೆ ಎಚ್ಚರಿಕೆ ವಹಿಸಿ ಕಾನೂನು ರೀತಿಯ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅಕ್ಬರ್ ಆಗ್ರಹಿಸಿದ್ದಾರೆ

Join Whatsapp