ಬೆಂಗಳೂರು: ಒಂದು ವರ್ಷದ ಹಿಂದೆ ಬಾಂಗ್ಲಾ ದೇಶದಿಂದ ನಕಲಿ ಆಧಾರ್ ಬಳಸಿ ಭಾರತಕ್ಕೆ ಅಕ್ರಮವಾಗಿ ಬಂದು ಬೆಂಗಳೂರಿನಲ್ಲಿ ವಾಸ ಮಾಡುತ್ತಿದ್ದ ಮೂವರು ಬಾಂಗ್ಲಾ ಪ್ರಜೆಗಳನ್ನು ಬೆಂಗಳೂರು ಪೋಲಿಸರು ಬಂಧಿಸಿದ್ದಾರೆ. ಅವರು ಪಶ್ಚಿಮ ಬಂಗಾಳ ಮೂಲಕ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದರು.
ಮೊಹಮ್ಮದ್ ರಫೀಕ್, ಸೈಫುಲಾ ಅಕ್ತರ್ , ಮೊಹಮ್ಮದ್ ಮುಫೀಝ್ ಶೇಕ್ ಬಂಧಿತರು. ಏಜೆಂಟ್ಗಳು ನಕಲಿ ಆಧಾರ್ ಕಾರ್ಡ್ ಮಾಡಿಸಿ ಕೊಟ್ಟಿದ್ದು, ಅದನ್ನು ಬಳಸಿ ಭಾರತಕ್ಕೆ ಬಂದಿದ್ದರು.
ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಆರೋಪಿಗಳ ವಿಚಾರಣೆ ನಡೆಸಲಾಗುತ್ತಿದೆ.