ಹುಲಿ ಉಗುರು, ನವಿಲು ಮಾಂಸ ಆಯ್ತು; ಜಿಂಕೆ ಕೊಂಬು ಇದ್ದ ಓರ್ವನ ಬಂಧನ

Prasthutha|

ಉತ್ತರ ಕನ್ನಡ: ಜೋಯಿಡಾದಲ್ಲಿ ಮನೆಯೊಂದರಲ್ಲಿ ಜಿಂಕೆ ಕೊಂಬು ಇದ್ದ ಕಾರಣಕ್ಕೆ ವ್ಯಕ್ತಿಯೋರ್ವರನ್ನು ಅರಣ್ಯಾಧಿಕಾರಿಗಳು ಬಂಧಿಸಿ ಜಿಂಕೆ ಕೊಂಬು ವಶಕ್ಕೆ ಪಡೆದಿದ್ದಾರೆ.

- Advertisement -

ಜೋಯಿಡಾದ ಶಿವಾಜಿ ವೃತ್ತದ ಮನೆಯೊಂದರಲ್ಲಿ ಎರಡು ಜಿಂಕೆ ಕೊಂಬುಗಳು ಇದ್ದವು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ಜಿಂಕೆ ಕೊಂಬುಗಳನ್ನು ವಶಕ್ಕೆ ಪಡೆದಿದ್ದಾರೆ. ಪ್ರಕಾಶ್ ನಾಯ್ಕ್ ಎಂಬಾತನನ್ನು ಬಂಧಿಸಿದ್ದಾರೆ ದಾಂಡೇಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ.