ಮಂಗಳೂರು: ಮಂಗಳೂರಿನ ಬಜಪೆಯಲ್ಲಿರುವ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹಳೇ ಏರ್ಪೋರ್ಟ್ ನ ಎಟಿಸಿ ಬಳಿಯ ರನ್ ವೇ ಗೆ ಅಕ್ರಮವಾಗಿ ಪ್ರವೇಶಿಸಿದ ಶಂಕಿತ ವ್ಯಕ್ತಿಯೊಬ್ಬನನ್ನು ಏರ್ಪೋರ್ಟ್ ಭದ್ರತಾ ಸಿಬ್ಬಂದಿಗಳು ವಶಕ್ಕೆ ಪಡೆದಿದ್ದಾರೆ.
ನಿಶೇಧಿತ ಪ್ರದೇಶಕ್ಕೆ ಅನಧಿಕೃತವಾಗಿ ನುಗ್ಗಿದ ವ್ಯಕ್ತಿಯನ್ನು ಬಜ್ಪೆ ಪೊಲೀಸರು ವಿಚಾರಣೆ ನಡೆಸಿದ್ದು, ಬಂಧಿತ ಆರೋಪಿ ಪಶ್ಚಿಮ ಬಂಗಾಳದ ಮುರ್ಸಿದಾಬಾದ್ ನ ರಾಕೇಶ ಎಂದು ಗುರುತಿಸಲಾಗಿದೆ. ತಾನು ಲಾರಿಯಲ್ಲಿ ಕ್ಲೀನರ್ ಆಗಿ ಕೆಲಸ ಮಾಡಿಕೊಂಡಿದ್ದು, ಇಲ್ಲೇ ಸಮೀಪದಲ್ಲಿ ಲಾರಿ ಡ್ರೈವರ್ ತನ್ನನ್ನು ಸಂಬಳ ನೀಡದೆ ಇಲ್ಲೆ ಬಿಟ್ಟು ಹೋಗಿದ್ದಾನೆ. ದಾರಿ ಕಾಣದೇ ವಿಮಾನ ನಿಲ್ದಾಣ ಎಂದು ತಿಳಿಯದೇ ಈ ಭಾಗಕ್ಕೆ ಬಂದಿರುತ್ತೇನೆ ಎಂದು ಈ ವೇಳೆ ತಿಳಿಸಿದ್ದಾನೆ.
ಆರೋಪಿ ವಿರುದ್ಧ ನಿಷೇಧಿತ ಪ್ರದೇಶಕ್ಕೆ ಅಕ್ರಮ ಪ್ರವೇಶದಡಿ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.