ಮಂಗಳೂರು: ಅನಧಿಕೃತ ಸುರತ್ಕಲ್ ಟೋಲ್ ಅನ್ನು ತೆರವುಗೊಳಿಸಲು ಆಗ್ರಹಿಸಿ ಇಂದು ಸುರತ್ಕಲ್ ಟೋಲ್ ಬಳಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಕಾರರನ್ನು ಪೊಲೀಸರು ಬಂಧಿಸಿದ ಘಟನೆ ಖಂಡನೀಯ ಎಂದು ಎಸ್ ಡಿಪಿಐ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರು ಹೇಳಿದ್ದಾರೆ.
ಬಿಜೆಪಿ ಸರಕಾರದ ವಿರುದ್ಧ ಯಾರು ಧ್ವನಿಯೆತ್ತುತ್ತಾರೆ ಅಂತಹ ಹೋರಾಟಗಾರರನ್ನು ಸುಳ್ಳು ಪ್ರಕರಣಗಳನ್ನು ಹಾಕಿ ಬಂಧಿಸುವಂತಹ ಹೇಡಿತನದ ಪ್ರವೃತ್ತಿ ನಿರಂತರವಾಗಿ ನಡೆಯುತ್ತಲೇ ಇದೆ ಟೋಲ್ ವಿರೋಧಿ ಹೋರಾಟಗಾರರ ಬಂಧನ ಅದರ ಮುಂದುವರಿದ ಭಾಗವಾಗಿದೆ. ಟೋಲ್ ವಿರುದ್ಧದ ಹೋರಾಟ ಇನ್ನಷ್ಟು ತೀವ್ರಗೊಳ್ಳಲಿದೆ ಎಂದು ಅವರು ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.