ಪೊಲೀಸ್ ವ್ಯವಸ್ಥೆಗೆ ಸವಾಲು ಒಡ್ಡಿ ಪಾತಕ ಕೃತ್ಯಗಳನ್ನು ಬಹಿರಂಗವಾಗಿ ನಡೆಸುತ್ತಿರುವ ಪುನೀತ್ ಕೆರೆಹಳ್ಳಿಯಂತಹ ಕಿರಾತಕರನ್ನು ತಕ್ಷಣ ಬಂಧಿಸಿ: ಎಸ್.ಡಿಪಿಐ

Prasthutha|

ಬೆಂಗಳೂರು: ಗೋ ರಕ್ಷಣೆ ಎಂಬ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಂಡು, ಇರ್ಗಿಶ್ ಪಾಶ ಎಂಬ ವ್ಯಕ್ತಿಯನ್ನು ಪುನೀತ್ ಕೆರೇಹಳ್ಳಿ ಮತ್ತು ತಂಡ ಕೊಂದಿದೆ ಎಂದು ಅವರ ಕುಟುಂಬ ದೂರು ಸಲ್ಲಿಸಿದೆ. ಪೊಲೀಸ್ ವ್ಯವಸ್ಥೆಗೆ ಸವಾಲು ಒಡ್ಡಿ ಪಾತಕಗಳನ್ನು ಬಹಿರಂಗವಾಗಿ ನಡೆಸುತ್ತಿರುವ ಈ ಕಿರಾತಕರನ್ನು ಬಂಧಿಸಲು ರಾಮನಗರ ಎಸ್.ಪಿ. ಅವರನ್ನು ಅಗ್ರಹಿಸುತ್ತೇನೆ ಎಂದು SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಟ್ವೀಟ್ ಮೂಲಕ ಒತ್ತಾಯಿಸಿದ್ದಾರೆ.

- Advertisement -


ಎಸ್.ಡಿ.ಪಿಐ ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್ ಟ್ವೀಟ್ ಮಾಡಿ, ಪುನೀತ್ ಕೆರೆಹಳ್ಳಿ ಮತ್ತು ಆತನ ತಂಡದಂತೆ ಕರ್ನಾಟಕದಾದ್ಯಂತ ಗೋ ರಕ್ಷಣೆ ಹೆಸರಿನಲ್ಲಿ ನಿರುದ್ಯೋಗಿ ಸಂಘೀ ಗೂಂಡಾಗಳಿಗೆ ದರೋಡೆ ನಡೆಸಲು, ಹಣ ನೀಡದಿದ್ದರೆ ಕೊಲೆಗೈಯಲು ಸರಕಾರ ಮತ್ತು ಪೊಲೀಸ್ ಇಲಾಖೆ ಅವಕಾಶ ಮಾಡಿಕೊಟ್ಟಿದೆಯೇ ಎಂದು ಬಿಎಸ್ ಬೊಮ್ಮಾಯಿ,ಕರ್ನಾಟಕ ಡಿಜಿಪಿ ಹಾಗೂ ರಾಮನಗರ ಎಸ್.ಪಿ. ಅವರನ್ನು ಪ್ರಶ್ನಿಸಿದ್ದಾರೆ.


ಗೋವುಗಳ ರಕ್ಷಣೆ ಹೆಸರಿನಲ್ಲಿ ಕೊಲೆ ಮಾಡಿರುವ ಪುನೀತ್ ಕೆರೆಹಳ್ಳಿ ಹಾಗೂ ಈತನ ಕೊಲೆಗಡುಕ ಸಹಚರರನ್ನು ತಕ್ಷಣ ಬಂಧಿಸಲು ರಾಮನಗರ ಎಸ್.ಪಿ ರವರಲ್ಲಿ ಆಗ್ರಹಿಸುತ್ತೇನೆ. ಇಂತಹ ಪುಂಡರು ಕಾನೂನಿನ ಭಯವಿಲ್ಲದೇ ಇಂತಹ ಕೃತ್ಯಗಳನ್ನು ಎಸಗಲು ಪ್ರೇರಣೆ ನೀಡುತ್ತಿರುವುದು ಯಾರು.? ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಯಾರ ಹೊಣೆ? ಎಂದು ಎಸ್.ಡಿಪಿಐ ರಾಜ್ಯ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.

Join Whatsapp