ಉಚ್ಚಿಲ ಮಸೀದಿ ಬಗ್ಗೆ ವಿವಾದ ಸೃಷ್ಟಿಸಿ ಜಿಲ್ಲಾಧಿಕಾರಿಗೆ ಬೆದರಿಕೆಯೊಡ್ಡಿರುವವರನ್ನು ಬಂಧಿಸಿ ಗಡಿಪಾರು ಮಾಡಿ: ರಿಯಾಝ್ ಫರಂಗಿಪೇಟೆ ಆಗ್ರಹ

Prasthutha|

ಮಂಗಳೂರು: ಅನಾವಶ್ಯಕವಾಗಿ ಉಚ್ಚಿಲ ಮಸೀದಿ ಬಗ್ಗೆ ವಿವಾದ ಸೃಷ್ಟಿಸಿ ಜಿಲ್ಲಾಧಿಕಾರಿಗೆ ಬೆದರಿಕೆಯೊಡ್ಡಿರುವವರನ್ನು ಬಂಧಿಸಿ ಗಡಿಪಾರು ಮಾಡಿ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(SDPI) ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಮಂಗಳೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ರಿಯಾಝ್ ಫರಂಗಿಪೇಟೆ ಆಗ್ರಹಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಮಾನ್ಯ ಮಂಗಳೂರು ಪೊಲೀಸ್ ಕಮಿಷನರ್ ಅವರೇ, ಅನವಶ್ಯಕವಾಗಿ ಉಚ್ಚಿಲ ಮಸೀದಿ ಜಾಗದ ಬಗ್ಗೆ ವಿವಾದ ಸೃಷ್ಟಿಸಿ ಎರಡು ಧರ್ಮಗಳ ಮಧ್ಯೆ ವೈರತ್ವವನ್ನು ಬೆಳೆಸುತ್ತಿರುವ ಮತ್ತು ಜಿಲ್ಲಾಧಿಕಾರಿ ರವರಿಗೆ ನೇರವಾಗಿ ಬೆದರಿಕೆಯೊಡ್ಡಿರುವ ಪ್ರಮೋದ್ ಉಚ್ಚಿಲ ಮತ್ತು ತಂಡವನ್ನು ಬಂಧಿಸಿ ಗಡಿಪಾರು ಮಾಡಿ ಉಚ್ಚಿಲದ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಿ ಎಂದು ಮನವಿ ಮಾಡಿದ್ದಾರೆ.

- Advertisement -