ಬಿಪಿನ್ ರಾವತ್ ಅಂತ್ಯಕ್ರಿಯೆಗೆ ಪಾಲ್ಗೊಳ್ಳಲು ಬಂದ ಸಂಸದ ತೇಜಸ್ವಿ ಸೂರ್ಯ ರನ್ನು ಗೇಟ್ ಹೊರಗಡೆ ನಿಲ್ಲಿಸಿದ ಸೇನಾ ಸಿಬ್ಬಂದಿ

Prasthutha|

ನವದೆಹಲಿ: ಕೂನೂರಿನ ನೀಲಗಿರಿ ಅರಣ್ಯದಲ್ಲಿ ನಡೆದ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಸಿಡಿಎಸ್‌ ಬಿಪಿನ್ ರಾವತ್ ದುರ್ಮರಣಕ್ಕೀಡಾಗಿದ್ದಾರೆ. ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಅನೇಕ ಗಣ್ಯರು ಅವರ ನಿವಾಸಕ್ಕೆ ತೆರಳಿ ಅಗಲಿದ ವೀರನಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. ಬಿಪಿನ್ ರಾವತ್‌ಗೆ ಅಂತಿಮ ನಮನ ಸಲ್ಲಿಸಲು ಸಂಸದ ತೇಜಸ್ವಿ ಸೂರ್ಯ ಕೂಡಾ ತೆರಳಿದ್ದು, ಅವರಿಗೆ ಭದ್ರತಾ ಸಿಬ್ಬಂದಿ ನಿವಾಸದೊಳಗೆ ಪ್ರವೇಶಿಸದಂತೆ ನಿರ್ಬಂಧಿಸಿದ್ದಾರೆ.

- Advertisement -

ಶುಕ್ರವಾರ ಬೆಳಗ್ಗೆ 11 ಗಂಟೆಗೆ ರಾವತ್‌ ಮತ್ತು ಪತ್ನಿ ಮಧುಲಿಕಾ ಅವರ ಕಳೇಬರವನ್ನು ಅವರ ನಿವಾಸಕ್ಕೆ ಕೊಂಡೊಯ್ಯಲಾಗಿದ್ದು, ಬೆಳಗ್ಗೆ 11.30ರಿಂದ 12.30ರವರೆಗೆ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ನೀಡಲಾಗಿತ್ತು. ಆದರೆ ಸಂಸದ ತೇಜಸ್ವಿ ಸೂರ್ಯ ಎರಡು ಗಂಟೆ ತಡವಾಗಿ ತಲುಪಿದ್ದಾರೆ. ತಡವಾಗಿ ಬಂದಿರುವ ಹಿನ್ನಲೆ ರಾವತ್ ನಿವಾಸದ ಒಳಗಡೆ ಹೋಗಲು ಸಿಬ್ಬಂದಿ ತೇಜಸ್ವಿ ಸೂರ್ಯಗೆ ಅವಕಾಶ ನೀಡಿಲ್ಲ ಎನ್ನಲಾಗಿದೆ. ಹೀಗಾಗಿ ತೇಜಸ್ವಿ ಸೂರ್ಯ ಅವರನ್ನು ಗೇಟ್ ಹೊರಗಡೆ ನಿಲ್ಲಿಸಲಾಗಿದೆ.

ಮಧ್ಯಾಹ್ನ 2 ಗಂಟೆ ಸುಮಾರಿಗೆ ಮೂರೂ ಪಡೆಗಳ ಮಿಲಿಟರಿ ಬ್ಯಾಂಡ್‌ನೊಂದಿಗೆ ಸಿಡಿಎಸ್‌ ಜನರಲ್ ಬಿಪಿನ್ ರಾವತ್ ಪಾರ್ಥಿವ ಶರೀರದ ಮೆರವಣಿಗೆ ನಡೆಸಿ, 4 ಗಂಟೆಗೆ ಧೌಲಾ ಕುವಾನ್‌ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂದು ಮೂಲಗಳು ಹೇಳಿವೆ.



Join Whatsapp