ಬಜರಂಗದಳ ಕಾರ್ಯಕರ್ತರಿಗೆ ಶಸ್ತ್ರಾಸ್ತ್ರ, ಬಂದೂಕು ತರಬೇತಿ: NIA ತನಿಖೆಗೆ ಆಗ್ರಹಿಸಿ SDPI ಪ್ರತಿಭಟನೆ

Prasthutha|

ಕೊಡಗು: ಕೊಡಗು ಜಿಲ್ಲೆಯ ಪೊನ್ನಂಪೇಟೆಯ ಸಾಯಿ ಶಂಕರ್ ವಿದ್ಯಾಸಂಸ್ಥೆಯಲ್ಲಿ ಬಜರಂಗದಳ ಮತ್ತು ವಿ.ಎಚ್.ಪಿ ಕಾರ್ಯಕರ್ತರಿಗೆ ಬಂದೂಕು, ಶಸ್ತ್ರಾಸ್ತ್ರ ಸೇರಿದಂತೆ ಭಯೋತ್ಪಾದನಾ ತರಬೇತಿ ನೀಡಲಾಗಿದ್ದು, ಈ ಘಟನೆಯನ್ನು ಸರ್ಕಾರ NIA ತನಿಖೆ ವಹಿಸಬೇಕೆಂದು ಆಗ್ರಹಿಸಿ SDPI ಕೊಡಗು ಜಿಲ್ಲಾ ಸಮಿತಿ ಇಂದು ಪ್ರತಿಭಟನೆ ಹಮ್ಮಿಕೊಂಡಿತ್ತು.

- Advertisement -

ಪೊನ್ನಂಪೇಟೆಯ ಸಾಯಿ ಶಂಕರ್ ವಿದ್ಯಾಸಂಸ್ಥೆಯಲ್ಲಿ ಬಜರಂಗದಳ, ವಿ.ಎಚ್.ಪಿ ಸೇರಿದಂತೆ ಸಂಘಪರಿವಾರದ ಕಾರ್ಯಕರ್ತರು ಶ್ರೌರ್ಯ ಪ್ರಶಿಕ್ಷಣ ಹೆಸರಿನಲ್ಲಿ ಒಂದು ವಾರಗಳ ಕಾಲ ಶಸ್ತ್ರಾಸ್ತ್ರ, ಬಂದೂಕು ಮತ್ತು ಭಯೋತ್ಪಾದನಾ ತರಬೇತಿ ನೀಡಿ ಶಾಂತಿಯುತವಾಗಿರುವ ಕೊಡಗು ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿಸಲು ಮುಂದಾಗಿರುವುದು ಅತ್ಯಂತ ಅಪಾಯಕಾರಿ ಮತ್ತು ಆತಂಕಕಾರಿ ಬೆಳವಣಿಗೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತರಬೇತಿ ಸಂದರ್ಭ ನೆರೆಯ ರಾಜ್ಯದ ಹಾಗೂ ವಿವಿಧ ಜಿಲ್ಲೆಯ ಹಲವು ವ್ಯಕ್ತಿಗಳು ಭೇಟಿ ನೀಡಿ ತರಬೇತಿ ನೀಡಿರುತ್ತಾರೆ. ಇದರಲ್ಲಿ ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರುವ ವ್ಯಕ್ತಿಗಳಿದ್ದರು. ಇದೇ ಮಾದರಿಯ ಭಯೋತ್ಪಾದನಾ ತರಬೇತಿಯನ್ನು ಪಡೆದಿರುವ ಸಂಘಪರಿವಾರದ ಕಾರ್ಯಕರ್ತರು ಕೇರಳದಲ್ಲಿ ತಮ್ಮ ಮನೆಯಲ್ಲೇ ಬಾಂಬನ್ನು ತಯಾರಿಸುವಾಗ ಮೃತಪಟ್ಟ ಘಟನೆಗಳಿವೆ. ಪೊಲೀಸ್ ಠಾಣೆಗೆ ಬಾಂಬ್ ಎಸೆದಿರುವ ಘಟನೆ ಕೂಡಾ ನಡೆದಿತ್ತು. ಇಲ್ಲಿಯೂ ಅಂತಹ ವ್ಯಕ್ತಿಗಳು ಬಂದಿರುವುದರಿಂದ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆಗೆ ದಕ್ಕೆಯಾಗುವ ಸಾಧ್ಯತೆ ಇದೆ. ಒಂದು ವಾರಗಳ ಕಾಲ ಶಸ್ತ್ರಾಸ್ತ್ರಗಳೊಂದಿಗೆ ಭಯೋತ್ಪಾದನಾ ತರಬೇತಿ ನಡೆದಿದ್ದರೂ ಪೊಲೀಸ್ ಇಲಾಖೆಗೆ ಯಾವುದೇ ಮಾಹಿತಿ ಇಲ್ಲದೇ ಇರುವುದು ಕಳವಳಕಾರಿ ಸಂಗತಿಯಾಗಿದೆ. ಈ ಪ್ರಕರಣದ ಬಗ್ಗೆ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸದಿದ್ದರೆ ಮುಂದೆ ನಡೆಯುವ ಎಲ್ಲಾ ಅನಾಹುತಗಳಿಗೆ ಜಿಲ್ಲಾಡಳಿತ ನೇರ ಹೊಣೆಯಾಗಲಿದೆ. ಹಾಗಾಗಿ ಇಡೀ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳದಿಂದ (ಎನ್.ಐ.ಎ) ತನಿಖೆಗೆ ಒಳಪಡಿಸಬೇಕಾಗಿದೆ ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

- Advertisement -

ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾದಳ NIA ಗೆ ವಹಿಸಬೇಕು ಮತ್ತು ಭಯೋತ್ಪಾದನ ಕೃತ್ಯವನ್ನು ಸಮರ್ಥಿಸಿದ ಮತ್ತು ಸ್ಥಳಕ್ಕೆ ಬೇಟಿ ನೀಡಿದ ಶಾಸಕರ ಸದಸ್ಯತ್ವವನ್ನು ರದ್ದುಗೊಳಿಸಬೇಕು ಎಂದು SDPI ಕೊಡಗು ಜಿಲ್ಲಾ ಸಮಿತಿ ಆಗ್ರಹಿಸಿದೆ.

ಭಯೋತ್ಪಾದನ ಕೃತ್ಯಕ್ಕೆ ಶಾಲೆಯನ್ನು ನೀಡಿದ ಆಡಳಿತದ ಮಂಡಳಿಯ ಸದಸ್ಯರ ಮೇಲೆ ಪ್ರಕರಣ ದಾಖಲಿಸಬೇಕು ಮತ್ತು ಶಾಲೆಯ ಮಾನ್ಯತೆಯನ್ನು ರದ್ದುಗೊಳಿಸಬೇಕು ಎಂದು ಜಿಲ್ಲಾ ಸಮಿತಿ ವತಿಯಿಂದ ಮನವಿ ಮಾಡಲಾಯಿತು.

ಈ ಪ್ರಕರಣದ ಬಗ್ಗೆ ಶಾಲೆಗೆ ನೋಟಿಸ್ ಜಾರಿಗೊಳಿಸಿದ ಸರ್ಕಲ್ ಇನ್ಸ್‌ಪೆಕ್ಟರ್ ಜಯರಾಂ ರವರನ್ನು ವರ್ಗಾವಣೆ ಗೊಳಿಸಿದ ಆದೇಶವನ್ನು ಹಿಂಪಡೆಯಬೇಕು ಮತ್ತು ತರಬೇತಿ ಶಿಬಿರದಲ್ಲಿ ಭಾಗವಹಿಸಿದವರ ಮತ್ತು ತರಬೇತಿ ದಾರರ ವಿರುದ್ಧ ಕೂಡ ಪ್ರಕರಣ ದಾಖಲಿಸಿ NIA ತನಿಖೆ ನಡೆಯಬೇಕು ಎಂದು ಆಗ್ರಹಿಸಲಾಯಿತು.



Join Whatsapp