ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣ: ಆರೋಪ ಸಾಬೀತಾಗುತ್ತಿದ್ದಂತೆಯೇ ಕೋರ್ಟ್ ನಿಂದ ಪರಾರಿಯಾದ ಉತ್ತರ ಪ್ರದೇಶ ಸಚಿವ

Prasthutha|

ಕಾನ್ಪುರ: ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣದಲ್ಲಿ ಉತ್ತರ ಪ್ರದೇಶದ ಮಧ್ಯಮ, ಸಣ್ಣ ಮತ್ತು ಅತಿ ಸಣ್ಣ ಉದ್ಯಮಗಳು ಹಾಗೂ ಖಾದಿ ಇಲಾಖೆಗಳ ಸಚಿವರಾಗಿರುವ ರಾಕೇಶ್ ಸಚನ್ ತಪ್ಪಿತಸ್ಥರು ಎಂದು ಸಾಬೀತಾಗುತ್ತಿದ್ದಂತೆಯೇ ಕೋರ್ಟ್ ನಿಂದ ಪರಾರಿಯಾಗಿದ್ದಾರೆ.

- Advertisement -


ರಾಕೇಶ್ ಸಚನ್ ಅವರು 1991ರ ಪ್ರಕರಣದಲ್ಲಿ ತಪ್ಪಿತಸ್ಥ ಎನ್ನುವುದು ಸಾಬೀತಾಗಿದೆ. ಕಾನ್ಪುರ ನ್ಯಾಯಾಲಯವು ರಾಕೇಶ್ ಅವರನ್ನು ತಪ್ಪಿತಸ್ಥ ಎಂದು ತೀರ್ಪು ನೀಡುತ್ತಿದ್ದಂತೆಯೇ ಅವರು ಕೋರ್ಟ್ ನಿಂದ ಪಲಾಯನ ಮಾಡಿದ್ದಾರೆ.
ಕೋರ್ಟ್ ನ ಅಧಿಕಾರಿಗಳ ಕಡೆಯಿಂದ ಶನಿವಾರ ರಾತ್ರಿ ದೂರು ಸ್ವೀಕರಿಸಲಾಗಿದೆ ಎಂದು ಕಾನ್ಪುರ ಪೊಲೀಸರು ಖಚಿತಪಡಿಸಿದ್ದಾರೆ.

ಈ ಆರೋಪವನ್ನು ತಳ್ಳಿಹಾಕಿರುವ ರಾಕೇಶ್ ಸಚನ್, ಪಲಾಯನ ಮಾಡಿರುವುದು ವದಂತಿ. ಕೆಲವು ಪ್ರಕರಣಗಳು ಬಾಕಿ ಇವೆ. ಕೆಲವು ವಿಷಯಗಳನ್ನು ತಪ್ಪಾಗಿ ಬಿಂಬಿಸಲಾಗುತ್ತಿದೆ. ಕೋರ್ಟ್ ನಿರ್ಧಾರವನ್ನು ಒಪ್ಪಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.



Join Whatsapp