ನೀವು ಪಾರ್ಲಿಮೆಂಟ್ ದಾಳಿಗೆ ಸಹಕರಿಸಿದ ಭಯೋತ್ಪಾದಕರಾ?: ಪ್ರತಾಪ ಸಿಂಹಗೆ ರಿಯಾಝ್ ಕಡಂಬು ಪ್ರಶ್ನೆ

Prasthutha|

ಬೆಂಗಳೂರು: ಹಿಜಾಬ್ ಹೋರಾಟಗಾರ್ತಿಯನ್ನು ಜಿಹಾದಿ ಎಂದು ಹೆಸರಿಸಿ, ರಘುಪತಿ ಭಟ್‌ಗೆ ಬಿಜೆಪಿ ಹೈಕಮಾಂಡ್ ಅನ್ಯಾಯ ಮಾಡಿದೆ ಎಂದು ಪೋಸ್ಟ್ ಬರೆದು ಬಳಿಕ ಬಿಜೆಪಿ ಹೈಕಮಾಂಡ್‌ಗೆ ಹೆದರಿ ಪೋಸ್ಟ್ ಡಿಲೀಟ್ ಮಾಡಿದ ಮೈಸೂರು ಸಂಸದ ಪ್ರತಾಪ ಸಿಂಹನ್ನು ಎಸ್ಡಿಪಿಐ ತರಾಟೆಗೆ ತೆಗೆದುಕೊಂಡಿದೆ.

- Advertisement -

ಪಾರ್ಲಿಮೆಂಟಿಗೆ ದಾಳಿ ನಡೆಸಲು ‘ಭಯೋತ್ಪಾದಕರಿಗೆ’ ಪಾಸ್ ಕೊಟ್ಟು ಕಳುಹಿಸಿದ ಸಂಸದರೇ ತನ್ನ ಹಕ್ಕಾದ ಹಿಜಾಬ್‌ಗಾಗಿ ಹೋರಾಡಿದವಳನ್ನು ಜಿಹಾದಿ ಎನ್ನುತ್ತೀರಿ‌. ನೀವು ಪಾರ್ಲಿಮೆಂಟ್ ದಾಳಿಗೆ ಸಹಕರಿಸಿದ ಭಯೋತ್ಪಾದಕರಾ? ಉಚ್ಚಾಟನೆಗೆ ಹೆದರಿ ಪೋಸ್ಟ್ ಡಿಲೀಟ್ ಮಾಡುವಷ್ಟು ಹದಗೆಟ್ಟಿದೆಯೇ ನಿಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು SDPI ಕರ್ನಾಟಕ ರಾಜ್ಯ ಸಮಿತಿ ಸದಸ್ಯ ರಿಯಾಝ್ ಕಡಂಬು ಪ್ರಶ್ನಿಸಿದ್ದಾರೆ.

Join Whatsapp