ಕೆಲವು ಮಾಜಿ ಸಿಜೆಐ ಭಾರತ ವಿರೋಧಿ ಗ್ಯಾಂಗಿನವರೆ?: ರಾಜ್ಯ ಸಭೆಯಲ್ಲಿ ಕಾನೂನು ಮಂತ್ರಿ

Prasthutha|

ನವದೆಹಲಿ: ರಾಜ್ಯಸಭೆಯಲ್ಲಿ ನಾಲ್ಕು ಪ್ರಶ್ನೆಗಳಿಗೆ ಉತ್ತರಿಸಲು ಎದ್ದು ನಿಂತ ಕಾನೂನು ಮಂತ್ರಿ ಕಿರಣ್ ರಿಜಿಜು ಅವರು ನೇರವಾಗಿ ಉತ್ತರಿಸದೆ ನಕಾರಾತ್ಮಕವಾಗಿ ಮಾತನಾಡಿ ಇದೇ ನನ್ನ ಉತ್ತರ ಎಂದರು.
ನ್ಯಾಯಾಧೀಶರ ಸೇವೆಯ ಬಗ್ಗೆ, ಕೊಲಿಜಿಯಂ ಬಗೆಗಿನ ಪ್ರಶ್ನೆಗೆ ರಿಜಿಜು ಉತ್ತರ “ಕೆಲವು ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶರು ಭಾರತ ವಿರೋಧಿ ಗ್ಯಾಂಗಿನವರೇ? ಎಂದು ಕೇಳಿದರು.

- Advertisement -


ರಾಜ್ಯಸಭೆಯಲ್ಲಿ ಕಾನೂನು ಮಂತ್ರಿ ಉತ್ತರ ಸರಕಾರವು ಸಿಜೆಐ ಅವರಿಗೆ ಮಾಹಿತಿ ನೀಡಿದೆಯೇ, ರಾಷ್ಟ್ರೀಯ ಭದ್ರತಾ ದೃಷ್ಟಿಯಿಂದ ನಮ್ಮ ನ್ಯಾಯಾಂಗ ಇಲಾಖೆಗೆ ಹತ್ತಾರು ದೂರುಗಳು ಬಂದಿವೆ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಗಳಿಗೆ ಒಂದೇ ಮಾದರಿಯ ನೇಮಕಾತಿ ಮತ್ತು ಸೇವಾ ನಿಯಮ ಇರಬೇಕು ಎಂಬುದು ಸರಕಾರದ ಆಶಯ ಎಂದು ಕಿರಣ್ ರಿಜಿಜು ಹೇಳಿದರು.
“ಸರ್ವೋಚ್ಚ ನ್ಯಾಯಾಲಯದ ಹಾಲಿ ಮತ್ತು ಮಾಜಿ ನ್ಯಾಯಾಧೀಶರ ಬಗ್ಗೆ ಕಾನೂನು ಸಚಿವಾಲಯದ ನ್ಯಾಯಾಂಗ ವಿಭಾಗಕ್ಕೆ ದೂರುಗಳ ಮೇಲೆ ದೂರು ಬರುತ್ತಿವೆ. ಕಾನೂನು ಸಚಿವಾಲಯದ ನ್ಯಾಯಾಂಗ ಇಲಾಖೆಯು ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯಗಳ ನೇಮಕಾತಿ ಮತ್ತು ಸೇವಾ ನಿಯಮಗಳ ಹೊರತಾಗಿ ಬೇರಾವುದೇ ಜವಾಬ್ದಾರಿ ಹೊಂದಿಲ್ಲ ಎಂದು ರಿಜಿಜು ಹೇಳಿದರು.
ನಿವೃತ್ತ ನ್ಯಾಯಾಧೀಶರಿಗೆ ನ್ಯಾಯಾಂಗದ ಬಗ್ಗೆ ಮಾತನಾಡುವ ಕೆಲಸ ಏಕೆ ಎಂದು ಕೇಳಿದರು.


ನ್ಯಾಯಾಂಗದ ವಿಷಯವಾಗಿ ನ್ಯಾಯಾಧೀಶರು ಒಳ ಯಾಂತ್ರೀಕತೆಯ ಮೂಲಕ ಜವಾಬ್ದಾದಾರರಾಗಬೇಕು. 1997ರ ಮೇ 7ರ ಸುಪ್ರೀಂ ಕೋರ್ಟ್ ಸಭೆಯಲ್ಲಿ ಸ್ವೀಕರಿಸಿದ ಎರಡು ತೀರ್ಮಾನಗಳನ್ನೂ ಅವರು ಹೇಳಿದರು.

- Advertisement -


ನ್ಯಾಯಾಂಗ ಜೀವನದ ಬಗ್ಗೆ ಮರು ಹೇಳಿಕೆ ನೀಡುವಾಗ ಅದರ ಮೌಲ್ಯ ಕಾಪಾಡುವುದು. ನ್ಯಾಯಾಧೀಶರು ಜಾಗತಿಕ ನಿಯಮಾವಳಿ ಪಾಲಿಸದೆ ತೀರ್ಪು ನೀಡಿದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವುದು.
ನ್ಯಾಯಾಲಯಗಳ ಬಗ್ಗೆ ಜನರು ನಮ್ಮ ಇಲಾಖೆಗೆ ದೂರುತ್ತಾರೆಂದರೆ ನ್ಯಾಯಾಲಯಗಳ ಒಳ ತಿಳಿವಳಿಕೆ ಏನಿದೆ? ಸುಪ್ರೀಂ ಕೋರ್ಟ್ ಸಿಜೆಐ ಕೂಡ ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ಬಗ್ಗೆ ದೂರು ಸ್ವೀಕರಿಸುತ್ತಲೇ ಇದ್ದಾರೆ.
ನಮ್ಮ ಇಲಾಖೆಗೆ ಬಂದ ದೂರುಗಳನ್ನು ಸಿಜೆಐ ಅವರಿಗೇ ಕಳುಹಿಸಿ ಕೊಟ್ಟಿದ್ದೇವೆ ಎಂದೂ ರಿಜಿಜು ಹೇಳಿದರು.



Join Whatsapp