ಅರಸೀಕೆರೆ: ತ್ರಿಪುರದಲ್ಲಿ ನಡೆಯುತ್ತಿರುವ ಮುಸ್ಲಿಮರ ಮೇಲಿನ ಹಿಂಸಾಚಾರವನ್ನು ಖಂಡಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಅರಸೀಕೆರೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ತಾಲ್ಲೂಕು ಕಾರ್ಯದರ್ಶಿ ಮುಬೀನ್ ಷರೀಫ್ ಮಾತನಾಡಿ, ತ್ರಿಪುರಾ ಸರ್ಕಾರದ ಪ್ರಾಯೋಜಕತ್ವದಲ್ಲಿ ಅಲ್ಲಿನ ಮುಸ್ಲಿಮರ ಮೇಲೆ ಸಂಘಪರಿವಾರ ಕಾರ್ಯಕರ್ತರು ಹಿಂಸಾಚಾರ ನಡೆಸಿದ್ದಾರೆ. ಮಸೀದಿ, ಮದ್ರಸಗಳನ್ನು ಧ್ವಂಸಗೊಳಿಸಲಾಗಿದ್ದು, ಸಾವಿರಾರು ಮುಸ್ಲಿಮರ ಅಂಗಡಿ, ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಇದರ ವಿರುದ್ಧ ಎಲ್ಲಾ ಜಾತ್ಯತೀತವಾದಿಗಳು, ಪ್ರಗತಿಪರರು ಧ್ವನಿ ಎತ್ತಬೇಕು ಎಂದರು.
ತಾಲ್ಲೂಕು ಸಮೀತಿ ಸದಸ್ಯರಾದ ನದೀಮ್ ಪಾಶ ಮಾತನಾಡಿ, ಪೋಲಿಸರು ಭಜರಂಗದಳ ಹಾಗು ವಿಶ್ವ ಹಿಂದುಪರಿಷತ್ ಗೂಂಡಾಗಳ ಮೇಲೆ ಕ್ರಮ ಕೈಗೊಂಡು ಅಲ್ಪಸಂಖ್ಯಾತರನ್ನು ರಕ್ಷಣೆ ನೀಡಬೇಕೆಂದು ಆಗ್ರಹಿಸಿದರು.
ಸಮಿತಿ ಸದಸ್ಯರಾದ ಶಬ್ಬೀರ್, ಇಸ್ಮಾಯಿಲ್ ಮತ್ತಿತರರು ಉಪಸ್ಥಿತರಿದ್ದರು. ಬಳಿಕ ತಹಶೀಲ್ದಾರ್ ಪಾಲಾಕ್ಷ ಮೂರ್ತಿ ಅವರ ಮೂಲಕ ರಾಷ್ಟ್ರಪತಿಗೆ ಮನವಿ ಪತ್ರ ಕಳುಹಿಸಲಾಯಿತು.