ದಕ್ಷಿಣ ಕನ್ನಡ: ಚುನಾವಣಾ ವೆಚ್ಚ ವೀಕ್ಷಕರ ನೇಮಕ

Prasthutha|

ಮಂಗಳೂರು: ಕೇಂದ್ರ ಚುನಾವಣಾ ಆಯೋಗವು ದಕ್ಷಿಣ ಕನ್ನಡ ಜಿಲ್ಲೆಗೆ ಚುನಾವಣಾ ವೀಕ್ಷಕರನ್ನು ನಿಯೋಜಿಸಿದೆ. ಈ ಪೈಕಿ ಚುನಾವಣಾ ಖರ್ಚು ವೆಚ್ಚಗಳ ಮೇಲೆ ನಿಗಾ ಇಡಲು ಚುನಾವಣಾ ಖರ್ಚುಗಳ ವೀಕ್ಷಕರು (ಎಕ್ಸ್ಪೆಂಡಿಚರ್ ಅಬ್ಸರ್ವ‌ರ್) ಜಿಲ್ಲೆಗೆ ಆಗಮಿಸಿದ್ದಾರೆ.

- Advertisement -

ವಿವರ ಇಂತಿದೆ:

200 ಬೆಳ್ತಂಗಡಿ ಹಾಗೂ 201 ಮೂಡಬಿದ್ರೆ ವಿಧಾನಸಭಾ ಕ್ಷೇತ್ರಕ್ಕೆ ಸುನಿಲ್ ಕುಮಾರ್ ಯಾದವ್ (ಐಆರ್ ಎಸ್) ಅವರು ಖರ್ಚು ವೆಚ್ಚಗಳ ವೀಕ್ಷಕರಾಗಿ ಆಗಮಿಸಿದ್ದಾರೆ. ಅವರ ಮೊಬೈಲ್ ಸಂಖ್ಯೆ 9141046505 ಆಗಿದೆ.ಅವರ ಇ-ಮೇಲ್ ವಿಳಾಸ expobs200201@gmail.com, ಆಗಿದೆ.

- Advertisement -

202 ಮಂಗಳೂರು ನಗರ ಉತ್ತರ ಹಾಗೂ 203 ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಶೀತಲ್ ಸರಿನ್ (ಐಆರ್ ಎಸ್)ಅವರನ್ನು ವೆಚ್ಚ ವೀಕ್ಷಕರನ್ನಾಗಿ ನಿಯೋಜಿಸಲಾಗಿದೆ, ಅವರ ಮೊಬೈಲ್ ಸಂಖ್ಯೆ 9141046506, ಇ-ಮೇಲ್ ವಿಳಾಸ expobs202203@gmail.com
ಆಗಿದೆ.

ಚುನಾವಣಾ ಖರ್ಚುಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಈ ವೆಚ್ಚ ವೀಕ್ಷಕರಿಗೆ ದೂರು, ಅವಾಲುಗಳನ್ನು ಸಲ್ಲಿಸಬಹುದಾಗಿದೆ ಎಂದು ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಅಪರ ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



Join Whatsapp